More

    ಆದಿತ್ಯ ಎಲ್​1: ಚಂದ್ರಯಾನದ ಬಳಿಕ ಇಸ್ರೋ ಸೂರ್ಯಯಾನ!

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಚಂದ್ರಯಾನದ ಬಳಿಕ ಸೂರ್ಯಯಾನವನ್ನೂ ಕೈಗೊಳ್ಳಲಿದೆ. ಈ ಮೂಲಕ 2023ರ ವರ್ಷ ಇಸ್ರೋ ಪಾಲಿಗೆ ಅಂತರ್ ಗ್ರಹ ಕಾರ್ಯಾಚರಣೆಯ ವರ್ಷವಾಗಲಿದೆ.

    ಇಸ್ರೋ ತನ್ನ ಆದಿತ್ಯ ಎಲ್ 1 ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್​ವಿ)/ ರಾಕೆಟ್​ನಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಕಳುಹಿಸಲಿದೆ. ಆ ಮೂಲಕ ಅದು ಸೌರ ವಾತಾವರಣವನ್ನು ಅಧ್ಯಯನ ಮಾಡಲು ಮುಂದಾಗಲಿದೆ.

    ಇದನ್ನೂ ಓದಿ: ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ

    ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಆ.23ರ ಸಂಜೆ 5.47ಕ್ಕೆ ಚಂದ್ರಯಾನದ ರೋವರ್​ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಅಂದರೆ ಇದಾದ ಒಂದೆರಡು ದಿನಗಳ ಬಳಿಕ ಆದಿತ್ಯ ಎಲ್​1 ಮಿಷನ್ ನಡೆಯಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಆಟಿ ಅಮಾವಾಸ್ಯೆ: ಔಷಧೀಯ ಗುಣಗಳ ಕೆತ್ತೆ ಕಷಾಯ ತುಳುಕೂಟದಿಂದ ಬೆಂಗಳೂರಿನಲ್ಲಿ ಉಚಿತವಾಗಿ ವಿತರಣೆ

    ಚಂದ್ರಯಾನ -3 ಗಗನನೌಕೆ ಹೊತ್ತೊಯ್ಯುತ್ತಿರುವ ತನ್ನ ಲ್ಯಾಂಡರ್ ಅನ್ನು ಚಂದ್ರನ ಮಣ್ಣಿನಲ್ಲಿ ಇಳಿಸಲು ಇಸ್ರೋ ಪ್ರಯತ್ನಿಸಿದ ಒಂದೆರಡು ದಿನಗಳ ನಂತರ ಆದಿತ್ಯ ಎಲ್ 1 ಮಿಷನ್ ನಡೆಯಲಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಇಸ್ರೋ ಆಗಸ್ಟ್ ಅಂತ್ಯದಲ್ಲಿ ಕೈಗೊಳ್ಳಲಿರುವ ಮುಂದಿನ ಅಂತರ್ ಗ್ರಹ ಮಿಷನ್ ಆದಿತ್ಯ ಎಲ್ 1 ಸೌರ ವೀಕ್ಷಣಾಲಯಕ್ಕೆ ಟ್ರ್ಯಾಕಿಂಗ್ ಬೆಂಬಲವನ್ನು ನೀಡುವುದಾಗಿ ಹೇಳಿದೆ. –ಏಜೆನ್ಸೀಸ್

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts