More

    ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಫೋಟೋ ಸೋರಿಕೆಯಾಯಿತೇ?

    ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮ ದಂಪತಿ ಈ ವರ್ಷ ಜನವರಿಯಲ್ಲಿ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದರು. ಆಗಿನಿಂದಲೂ ಅಭಿಮಾನಿಗಳು ವಾಮಿಕಾ ಎಂಬ ಹೆಸರಿನ ಈ ಮಗುವನ್ನು ಅಥವಾ ಅದರ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತ ಬಂದಿದ್ದಾರೆ. ಆದರೆ ಮಗುವಿನ ಮುಖವನ್ನು ಅಥವಾ ಅದರ ಚಿತ್ರವನ್ನು ತೋರಿಸಲು ನಿರಾಕರಿಸುತ್ತಲೇ ಬಂದಿರುವ ಕೊಹ್ಲಿ-ಅನುಷ್ಕಾ ದಂಪತಿ, ಖಾಸಗಿತನಕ್ಕೆ ಗೌರವ ನೀಡಿ ಎಂಬ ಬೇಡಿಕೆಯನ್ನು ಮಾಧ್ಯಮ ಛಾಯಾಗ್ರಾಹಕರಿಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಬರುವುದು ವಾಮಿಕಾಳ ಆಯ್ಕೆಯೇ ಆಗಿರಬೇಕೆಂದೂ ಕೊಹ್ಲಿ ದಂಪತಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಇದರ ನಡುವೆ ಕೊಹ್ಲಿ-ಅನುಷ್ಕಾ ದಂಪತಿ ಇತ್ತೀಚೆಗೆ ಭಾರತ ತಂಡದ ಜತೆಗೂಡಿ ಇಂಗ್ಲೆಂಡ್​ ಪ್ರವಾಸಕ್ಕೆ ಹೊರಟಾಗ ವಿಮಾನ ನಿಲ್ದಾಣದ ಹೊರಗೆ ಮಾಧ್ಯಮ ಛಾಯಾಗ್ರಾಹಕರು ವಾಮಿಕಾಳ ಚಿತ್ರ ಕ್ಲಿಕ್ಕಿಸಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಅನುಷ್ಕಾ ಮಗುವನ್ನು ಸಂಪೂರ್ಣವಾಗಿ ಮುಚ್ಚಿಟ್ಟು ಛಾಯಾಗ್ರಾಹಕರ ಕಣ್ತಪ್ಪಿಸಿದ್ದರು. ಈ ನಡುವೆ ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಅವಳದ್ದು ಎನ್ನಲಾದ ಚಿತ್ರವೊಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದರೆ, ವಾಮಿಕಾಳ ಚಿತ್ರ ಕೊನೆಗೂ ಸೋರಿಕೆಯಾಯಿತೇ?

    ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಫೋಟೋ ಸೋರಿಕೆಯಾಯಿತೇ?

    ಮುದ್ದಾಗಿರುವ ಈ ಮಗುವಿನ ಚಿತ್ರ ವಾಮಿಕಾಳದ್ದೆಂದು ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಭಾರಿ ವೈರಲ್​ ಆಗಿದೆ. ಹಲವು ಫ್ಯಾನ್​ಪೇಜ್​ಗಳಲ್ಲಿ ಬೇಬಿ ವಾಮಿಕಾಳ ಚಿತ್ರ ಎಂದೇ ಅದನ್ನು ಪ್ರಕಟಿಸಲಾಗುತ್ತಿದೆ. ಅಲ್ಲದೆ, ಮಗು ಸಂಪೂರ್ಣವಾಗಿ ವಿರಾಟ್​ ಕೊಹ್ಲಿಯನ್ನೇ ಹೋಲುತ್ತಿದ್ದು, ಅಮ್ಮನ ಹೋಲಿಕೆ ಮಗುವಿಗೆ ಬಂದಿಲ್ಲ ಎಂದೂ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್​ ಆಡುವ ಎಲ್ಲರಿಗೂ ಸಿಕ್ಸ್​ ಪ್ಯಾಕ್​ ಇರಬೇಕಾಗಿಲ್ಲ, ಪಾಕ್​ ಕ್ರಿಕೆಟಿಗನಿಗೆ ಪ್ಲೆಸಿಸ್​ ಬೆಂಬಲ

    ಆದರೆ ವಾಮಿಕಾಳ ಚಿತ್ರ ಇನ್ನೂ ಬಹಿರಂಗ ಆಗಿಲ್ಲ ಎಂಬ ಅಂಶವೂ ಫ್ಯಾಕ್ಟ್​ ಚೆಕ್​ನಲ್ಲಿ ಬಹಿರಂಗವಾಗಿದೆ. ಯಾಕೆಂದರೆ ವೈರಲ್​ ಆಗಿರುವ ಈ ಚಿತ್ರ ವಿರಾಟ್​ ಕೊಹ್ಲಿ ಅವರ ಬಾಲ್ಯದ್ದಾಗಿದೆ. ಹಿಂದೆಂದೂ ಕಂಡಿರದ ವಿರಾಟ್​ ಕೊಹ್ಲಿ ಅವರ ಬಾಲ್ಯದ ಅಪರೂಪದ ಚಿತ್ರ ಇದಾಗಿದೆ. ಹೀಗಾಗಿ ಮಗುವನ್ನು ಕಂಡಾಗ ಅಭಿಮಾನಿಗಳಿಗೆ ಕೊಹ್ಲಿ ಅವರಂತೆಯೇ ಕಂಡಿರುವ ಅಚ್ಚರಿ ಏನಲ್ಲ ಬಿಡಿ. ವಾಮಿಕಾಳ ಚಿತ್ರವನ್ನು ನೋಡಲು ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಾಗಿರುವುದು ಕೂಡ ಇದರಿಂದ ಖಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts