More

    ಏಕಕಾಲದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಂದಿಗಳ ಹತ್ಯೆ; ಈ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ

    ಗುವಾಹಟಿ: ಅಸ್ಸಾಂನಲ್ಲಿ ದಿನದಿಂದ ದಿನಕ್ಕೆ ಅಫ್ರಿಕನ್​ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಲಖಿಂಪುರ್​ ಜಿಲ್ಲೆಯಲ್ಲಿ ರೋಗ ಪತ್ತೆಯಾಗಿದೆ. ಹಂದಿಜ್ವರ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾಡಳಿತ ಪ್ರದೇಶದ ಸುತ್ತ ಫಾರ್ಮ್​ಗಳಲ್ಲಿ ಸಾಕಿರುವ ಹಂದಿಗಳನ್ನು ಹತ್ಯೆ ಮಾಡಿದೆ.

    ಪಶು ವೈದ್ಯರ ಸಹಾಯದೊಂದಿಗೆ ಸೋಂಕು ಕಾಣಿಸಿಕೊಂಡಿರುವ ಪ್ರದೇಶದ ಸುತ್ತ ಮುತ್ತ ಸಾಕಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಹಂದಿಗಳನ್ನು ಕರೆಂಟ್​ ಶಾಕ್​ ನೀಡಿ ಕೊಲ್ಲಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಯಾವ ಧರ್ಮ ಸಮಾನ ಹಕ್ಕುಗಳನ್ನು ನೀಡುವುದಿಲ್ಲ ಅದು ರೋಗಕ್ಕೆ ಸಮ: ಸಚಿವ ಪ್ರಿಯಾಂಕ ಖರ್ಗೆ

    ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸಚಿವ ಅತುಲ್ ಬೋರಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಏವಿಯನ್ ಇನ್ಫ್​​ಫ್ಲೂಯೆಂಜಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಿಟ್ಟಿನಲ್ಲಿ ಹೊರರಾಜ್ಯಗಳಿಂದ ಕೋಳಿ ಹಾಗೂ ಹಂದಿಗಳ ಅಮದಿಗೆ ನಿಷೇಧ ಹೇರಲಾಗಿದೆ.

    ಸೋಂಕು ಕಾಣಿಸಿಕೊಂಡ ಪ್ರದೇಶದ ಸುತ್ತ ಮುತ್ತ ಸಾಕಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಹಂದಿಗಳನ್ನು ಪಶು ವೈದ್ಯರು ಕರೆಂಟ್​ ಶಾಕ್​ ನೀಡಿ ಸಾಯಿಸಿದ್ದಾರೆ. ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸೋಂಕು ಹರಡದಂತೆ ಮುಂಜಾಗ್ರಾತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts