More

    ಅಫಜಲಪುರ: ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ತಯಾರಿಸಿ- ಶಾಸಕ ಎಂ.ವೈ.ಪಾಟೀಲ್​

    ಅಫಜಲಪುರ: ಎಲ್ಲೆಡೆ ಬರ ಆವರಿಸಿದ್ದು, ನೀರಿನ ಮೂಲಗಳು ಬತ್ತುತ್ತಿವೆ. ಕುಡಿವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ತಯಾರಿಸಿ, ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಸೂಚನೆ ನೀಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿಶೇಷ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರ ನಿರ್ವಹಣೆಗೆ ಶಾಸಕಾಂಗದ ಜತೆಗೆ ಕಾರ್ಯಾಂಗವು ಶ್ರಮವಹಿಸಿ ಕೆಲಸ ಮಾಡಿದಾಗ ಯಶಸ್ಸು ಸಿಗಲು ಸಾಧ್ಯ. ಗ್ರಾಮೀಣಾಭಿವೃದ್ಧಿ ಇಲಾಖೆಯು ಹಳ್ಳಿಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

    ಕೆಲವೆಡೆ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡರೂ ಮನೆಗಳಿಗೆ ನೀರು ಬರುತ್ತಿಲ್ಲ ಎಂಬ ದೂರುಗಳಿವೆ. ಕೂಡಲೇ ಪರಿಶೀಲನೆ ಮಾಡಿ, ಈ ಬಗ್ಗೆ ಸಮಗ್ರ ವರದಿ ನೀಡಬೇಕು. ಹಳ್ಳಿಗಳಲ್ಲಿ ಕೆಲಸವಿಲ್ಲದಿರುವುದರಿಂದ ಜನರು ಗುಳೆ ಹೋಗುತ್ತಿದ್ದು, ಎಲ್ಲೆಡೆ ಖಾತ್ರಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಹೇಳಿದರು.

    ಗುತ್ತಿಗೆದಾರರು ಮಾತನಾಡಿ, ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸದೆ ಅಂದಾಜು ಪಟ್ಟಿ ಸಿದ್ದಪಡಿಸಿದ್ದಾರೆ. ಜತೆಗೆ ಕಾಮಗಾರಿ ನಡೆಯುವ ವೇಳೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ನಾವು ಅವರು ನೀಡಿರುವ ಎಸ್ಟಿಮೇಟ್ ಆಧಾರದಲ್ಲಿ ಕೆಲಸ ಮಾಡಿz್ದೆÃವೆ. ಈಗ ನೀರು ತಲುಪುತ್ತಿಲ್ಲ ಎಂದು ದೂರಿದರೆ ಏನು ಮಾಡೋದು ಎಂದು ಸಮಸ್ಯೆ ಹೇಳಿಕೊಂಡರು.

    ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಂಕರ ರೂಬಿಕರ್ ಮಾತನಾಡಿ, ಜೆಜೆಎಂ ಕಾಮಗಾರಿ ಬಗ್ಗೆ ಯಾವುದೇ ಎಸ್ಟಿಮೇಟ್ ತಯಾರಿಸಿಲ್ಲ. ಬದಲಾಗಿ ಹೈದರಾಬಾದ್ ಮೂಲದ ಖಾಸಗಿ ಕಂಪನಿ ಅಂದಾಜು ದರಪಟ್ಟಿ ಸಿದ್ಧಪಡಿಸಿ ನೀಡಿದೆ. ತಾಲೂಕಿನೆಲ್ಲಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ, ವಾರದೊಳಗೆ ವರದಿ ನೀಡಲಾಗುವುದು ಎಂದು ಹೇಳಿದರು.

    ತಹಸೀಲ್ದಾರ್ ಸಂಜೀವಕುಮಾರ ದಾಸರ, ತಾಪಂ ಇಒ ರಮೇಶ ಸುಲ್ಪಿ, ಅಧಿಕಾರಿಗಳಾದ ನಾಗರಾಜ, ಅಜಯ ನನ್ನಾ, ಹೊನ್ನಪ್ಪ ಕಂಬಾರ, ಭೀಮಾಶಂಕರ ಪತ್ತಾರ, ರಮೇಶ, ವಿಜಯಕುಮಾರ, ವಿದ್ಯಾಧರ ಕಾಂಬಳೆ, ಮಹಾಂತೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts