More

    ಆಫ್ಘಾನ್​ ಆರಂಭಿಕ ಆಟಗಾರ ನಜೀಬ್​ ಇನ್ನಿಲ್ಲ: ರಸ್ತೆ ದಾಟುವಾಗ ನಡೆಯಿತು ದುರಂತ

    ಕಾಬೂಲ್​: ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ನಜೀಬ್​ ತಾರಕೈ ಜೀವನ್ಮರಣದ ಹೋರಾಟದ ನಡುವೆ ಮಂಗಳವಾರ (ಅಕ್ಟೋಬರ್​ 06) ಕೊನೆಯುಸಿರೆಳೆದಿದ್ದಾರೆ. 29 ವರ್ಷದ ನಜೀಬ್​ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಉತ್ತಮ ಆಟಗಾರನನ್ನು ಕಳೆದುಕೊಂಡ ಆಫ್ಘಾನ್​ ಕ್ರಿಕೆಟ್ ಮಂಡಳಿ (ಎಸಿಬಿ) ಅತೀವ ದುಃಖ ವ್ಯಕ್ತಪಡಿಸಿದೆ.

    ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು, ಎಸಿಬಿ ಮತ್ತು ಕ್ರಿಕೆಟ್​ ಪ್ರೀತಿಸುವ ಅಫ್ಘಾನಿಸ್ತಾನವು ತಮ್ಮ ಸ್ಫೋಟಕ ಆರಂಭಿಕ ಆಟಗಾರನನ್ನು ಮತ್ತು ಒಳ್ಳೆಯ ವ್ಯಕ್ತಿ ನಜೀಬ್​ ತಾರಕೈರನ್ನು ಕಳೆದುಕೊಂಡಿದೆ. ಇದು ನಿಜಕ್ಕೂ ಹೃದಯಬಿರಿಯುವಂತದ್ದು, ನಜೀಬ್​ ಅಪಘಾತದಿಂದ ಮೃತಪಟ್ಟಿದ್ದಾರೆ. ನಿಜಕ್ಕೂ ನಮಗೆ ಶಾಕ್​ ಆಗಿದೆ. ಅಲ್ಲಾ ಅವರಿಗೆ ಆಶೀರ್ವಾದ ಮಾಡಲಿ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ರದ್ದು ಆತ್ಮಹತ್ಯೆಯಲ್ಲ ಕೊಲೆ: ಸ್ಫೋಟಕ ಆಡಿಯೋ ಸಂಭಾಷಣೆ ಲೀಕ್..!

    ಅಪಘಾತದಿಂದ ನಜೀಬ್​ ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಸುಮಾರು 22 ಗಂಟೆಗಳವರೆಗೆ ಯಾವುದೇ ಚಲನೆ ಇಲ್ಲದೆ, ನಜೀಬ್​ ಐಸಿಯುನಲ್ಲಿ ಕೋಮಾಗೆ ಜಾರಿದ್ದರು ಎಂದು ಆಫ್ಘಾನ್​ ಕ್ರಿಕೆಟ್​ ಬೋರ್ಡ್​ನ ಮಾಜಿ ಮೀಡಿಯಾ ಮ್ಯಾನೇಜರ್​ ಅಕ್ಟೋಬರ್​ 3ರ ಶನಿವಾರದಂದು ಮಾಹಿತಿ ನೀಡಿದ್ದರು.

    ಶುಕ್ರವಾರ (ಅ. 2) ಪೂರ್ವ ನಂಗಾರ್​​ಹರ್​ ಪ್ರಾಂತ್ಯದ ಕಿರಾಣಿ ಅಂಗಡಿಗೆ ಭೇಟಿ ನೀಡಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುವಾಗ ರಸ್ತೆ ದಾಟುವ ವೇಳೆ ತಿರುವಿನಲ್ಲಿ ಕಾರೊಂದು ನಜೀಬ್​ ಅವರಿಗೆ ಡಿಕ್ಕಿ ಹೊಡೆದಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಕೋಮಾಗೆ ಜಾರಿದ್ದ ನಜೀಬ್​ ಇದೀಗ ಇಹಲೋಕ ತ್ಯಜಿಸಿದ್ದಾರೆ. ನಜೀಬ್​ ಸಾವಿಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

    ತಮಿಳುನಾಡಿನಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ ದಲಿತ ಶಾಸಕನ ಅಂತರ್ಜಾತಿ ವಿವಾಹ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts