More

    ರಾಸಾಯನಿಕ ಬಳಕೆಯಿಂದ ಆರೋಗ್ಯದಲ್ಲಿ ದುಷ್ಪರಿಣಾಮ

    ಚಿಕ್ಕಮಗಳೂರು: ಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುತ್ತಿರುವುದರಿಂದ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಎಐಟಿ ಕಾಲೇಜಿನ ಆಂಪಿ ಥಿಯೇಟರ್‌ನಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕಾದ ಅವಶ್ಯಕತೆ ಇದೆ. ಗ್ರಾಹಕರೂ ಹೆಚ್ಚು ಸಿರಿಧಾನ್ಯ ಬಳಸುವುದರಿಂದ ಬೆಳೆಯುವವರಿಗೆ ಪ್ರೇರೇಪಣೆ ದೊರೆಯುತ್ತದೆ ಎಂದು ಮನವಿ ಮಾಡಿದರು.ಸಿರಿಧಾನ್ಯ ಹೆಚ್ಚು ಬಳಸುವುದರಿಂದ ಹೆಚ್ಚಿನ ಲಾಭವಾಗಲಿದೆ. 40 ವರ್ಷಗಳ ಹಿಂದಿನ ಜನರ ಆರೋಗ್ಯ ಹಾಗೂ ಅವರ ಜೀವನ ಶೈಲಿ ನೋಡಿದರೆ ಸಿರಿಧಾನ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕಿದೆ ಎನ್ನುವುದು ತಿಳಿಯಲಿದೆ ಎಂದರು.ಬಯಲುಸೀಮೆಯ ಬಹುತೇಕ ರೈತರು ಬದುಕನ್ನು ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ. ಅವರಿಗೆ ಸರಿಯಾದ ಮಳೆ, ಬೆಳೆ, ಬೆಲೆ ಸಿಗುವಂತೆ ಸರ್ಕಾರ ಸಮರ್ಪಕ ಯೋಜನೆ ರೂಪಿಸಿದರೆ ರೈತರು ಗುಳೆ ಹೋಗುವುದು ತಪ್ಪುತ್ತದೆ. ಜತೆಗೆ ನಾವು ಮೊದಲು ಸಿರಿಧಾನ್ಯ ಬಳಸಲು ಆರಂಭಿಸಿ ಬೇರೆಯವರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಸಿರಿಧಾನ್ಯ ಬಳಕೆಯಿಂದಾಗಿ ನಮಗೆ ಮೂರು ರೀತಿಯ ಉಪಯೋಗ ಆಗುತ್ತದೆ. ಸಿರಿಧಾನ್ಯ ಒಂದು ಆರೋಗ್ಯಕರ ಪದಾರ್ಥವಾಗಿದ್ದು ಹವಾಮಾನ ವೈಪರೀತ್ಯದಲ್ಲೂ ರೈತರ ಕೈ ಹಿಡಿಯುವ ಬೆಳೆಯಾಗಿದೆ ಎಂದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಲ್.ಸುಜಾತಾ, ಎಐಟಿ ಪ್ರಾಚಾರ್ಯ ಸಿ.ಟಿ.ಜಯದೇವ್, ರೈತ ಮುಖಂಡರಾದ ಗುರುಶಾಂತಪ್ಪ, ಎಸ್.ಕೊಪ್ಪಲು ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts