More

    ಮುಂದುವರಿದ ವರುಣನ ಅಬ್ಬರ

    ತೆಲಸಂಗ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮ ಸೇರಿ ಸುತ್ತಮುತ್ತಲ ಗ್ರಾಮಗಳ ಮನೆಗಳ ಗೋಡೆಗಳು ಕುಸಿಯುತ್ತಿದ್ದು, ಮಹಾನವಮಿ ತಯಾರಿಗೆ ಸುಣ್ಣಬಣ್ಣ ಹಚ್ಚಿ ಸಿದ್ಧತೆಯಲ್ಲಿ ತೊಡಗಿದ್ದ ಜನರ ಸಂತಸಕ್ಕೆ ಮಳೆರಾಯ ಬೇಸರ ಮೂಡಿಸಿದ್ದಾನೆ. ಸತತ ಬರಗಾಲ ಸ್ಥಿತಿ ಎದುರಿಸುತ್ತಿದ್ದ ಗ್ರಾಮಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಮಳೆಯಿಂದಾಗಿ ಗ್ರಾಮದ ಗುಡುಸಾಬ ಕರ್ಜಗಿ ಎಂಬುವರಿಗೆ ಸೇರಿದ ಮನೆ ಕುಸಿದು, ಆಡು ಸಾವನ್ನಪ್ಪಿದೆ. ಯಮನಪ್ಪ ಕಲಾಲ ಎಂಬುವರ ಮಣ್ಣಿನ ಮನೆ ಕುಸಿದ ಪರಿಣಾಮ ಕುಟುಂಬಸ್ಥರ ಬದುಕು ಬೀದಿಗೆ ಬಂದಿದ್ದು, ಆಶ್ರಯಕ್ಕಾಗಿ ಕೋರುತ್ತಿದ್ದಾರೆ. ಮಳೆಯಿಂದಾಗಿ ಗ್ರಾಮದಲ್ಲಿ 50ಕ್ಕೂ ಅಧಿಕ ಮನೆಗಳು ಕುಸಿದಿವೆ. ಅಲ್ಲದೇ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಾನಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಹಳ್ಳ ದಾಟಲು ಪರದಾಡುತ್ತಿರುವ ಜನ

    ಮಳೆಯಿಂದಾಗಿ ತೆಲಸಂಗ ಗ್ರಾಮದ ಡೋಣಿ ಹಳ್ಳ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರು ಪರದಾಡುತ್ತಿದ್ದಾರೆ. ಹಗ್ಗ ಬಳಸಿ, ಜೀವದ ಹಂಗು ತೊರೆದು ಹಳ್ಳದಾಟುವ ಸಾಹಸ ಮಾಡುತ್ತಿದ್ದರು.ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿತ್ತು. ಬುಧವಾರ ಸಂಜೆ ಹಳ್ಳದ ಎರಡೂ ಬದಿಗೆ ಇಬ್ಬರು ಯುವಕರು ನಿಂತು ಮಹಿಳೆಯನ್ನು ಹಗ್ಗದ ಮೂಲಕ ಹಳ್ಳ ದಾಟಿಸಿದ್ದಾರೆ. ಮಳೆಯಿಂದಾಗಿ ಅಥಣಿ ತಾಲೂಕಿನ ನಾಗನೂರ ಪಿ.ಎ., ಸಂಬರಗಿ, ಕಿರಣಗಿ, ತಾಂವಶಿ, ತಾಂವಶಿ, ಕಲ್ಲೋತ್ತಿ, ಕಿರಣಗಿ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಬಂದ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts