More

    ಶಿವಮೊಗ್ಗದಲ್ಲಿ ಎರಡು ದಿನಗಳ ಟ್ರೇಡ್ ಲೈಸೆನ್ಸ್ ಮೇಳ

    ಶಿವಮೊಗ್ಗ: ಟ್ರೇಡ್ ಲೈಸೆನ್ಸ್ ವಿತರಣೆಗೆ ನಗರ ಪಾಲಿಕೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಟ್ರೇಡ್ ಲೈಸೆನ್ಸ್ ಮೇಳದ ಮೂಲಕ ವ್ಯಾಪಾರಿಗಳ ಸಮಯ ಉಳಿತಾಯ ಮಾಡಲಾಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ತಿಳಿಸಿದರು.
    ಗುರುವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಗುರುವಾರ ಎರಡು ದಿನಗಳ ಟ್ರೇಡ್ ಲೈಸೆನ್ಸ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಿ ತ್ವರಿತವಾಗಿ ಪರವಾನಗಿ ನೀಡುವುದರಿಂದ ವ್ಯಾಪಾರಿಗಳಿಗೆ ಹಚ್ಚಿನ ಅನುಕೂಲವಾಗುತ್ತದೆ. ಅನವಶ್ಯಕ ಓಡಾಟ ತಪ್ಪಿಸಿದಂತಾಗುತ್ತದೆ ಎಂದರು.
    ಈ ಹಿಂದೆ ನಡೆದ ಮೇಳದಲ್ಲಿ 580 ವ್ಯಾಪಾರಿಗಳಿಗೆ ಟ್ರೇಡ್ ಲೈಸೆನ್ಸ್ ನೀಡಲಾಗಿತ್ತು. ಪಾಸ್ ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ವಿದ್ಯುತ್ ಬಿಲ್ ತಂದರೆ ಸ್ಥಳದಲ್ಲೇ ಪರವಾನಗಿ ನೀಡಲಾಗುವುದು. ಹಿಟ್ಟಿನ ಗಿರಣಿ, ಚಿಕನ್ ಹಾಗೂ ಮಟನ್ ಸ್ಟಾಲ್, ಸಣ್ಣ ಕೈಗಾರಿಕೆಗಳು ಸೇರಿದಂತೆ ಕೆಲವು ಉದ್ದಿಮೆಗಳಿಗೆ ನಿರಾಕ್ಷೇಪಣೆ ಪತ್ರದ ಅಗತ್ಯವಿದೆ. ಇವುಗಳಿಗೆ ಟ್ರೇಡ್ ಲೈಸೆನ್ಸ್ ನೀಡಲು ಕಾಲಾವಕಾಶ ಅಗತ್ಯವಿದೆ ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts