More

    ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗಲಿ

    ಅರಸೀಕೆರೆ: ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಶಾಸಕ.ಎಚ್.ಕೆ.ಸುರೇಶ್ ಹೇಳಿದರು.

    ತಾಲೂಕಿನ ಜಾವಗಲ್ ಗ್ರಾಮದ ಎಪಿಎಂಸಿ ಉಪ ಪ್ರಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ದಿನಗಳು ಹತ್ತಿರವಾಗುತ್ತಿದ್ದು, ಕುಡಿಯುವ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕೊಳವೆ ಬಾವಿಗಳಿಗೆ ಏಳು ತಾಸು ವಿದ್ಯುತ್ ಪೂರೈಕೆ ಮಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದರು.

    ವಿದ್ಯುತ್ ಪರಿವರ್ತಕ ಸುಟ್ಟು ಹೋದಲ್ಲಿ ವಿನಾಕಾರಣ ತೊಂದರೆ ನೀಡದೆ ತ್ವರಿತಗತಿಯಲ್ಲಿ ಸಮಸ್ಯೆ ಪರಿಹರಿಸಬೇಕು. ಜತೆಗೆ ಚಿರತೆ, ಕರಡಿಗಳ ಉಪಟಳವಿದ್ದು ಜನರು ಜಾಗೃತರಾಗಿರಬೇಕು.ವಿದ್ಯುತ್ ಪರಿವರ್ತಕ ಸೌಲಭ್ಯ ಪಡೆಯಲು 2018ರಲ್ಲಿ ಶುಲ್ಕ ಪಾವತಿ ಮಾಡಿರವ ರೈತರಿಗೆ ಆದ್ಯತೆ ಮೇಲೆ ಸವಲತ್ತು ಒದಗಿಸಿ ಎಂದು ಸೂಚಿಸಿದರು.

    ಜಾವಗಲ್ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿಗಳ ನಾಗರಿಕರು ಸಮಸ್ಯೆಗಳ ಪಟ್ಟಿ ನೀಡಿ ಶಾಸಕರ ಗಮನಸೆಳೆದು ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು. ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷ ಶಿವಣ್ಣ, ಎಡಿಎ ವಿನಯ್, ಪಿಡಿಒ ರವಿ, ಸೆಸ್ಕ್ ಅಧೀಕ್ಷಕ ಚಂದ್ರಶೇಖರ್, ಎಇಇ ಮಂಜುನಾಥ್, ನೋಡಲ್ ಅಧಿಕಾರಿ ಶರಚ್ಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts