More

    ಸಮರ್ಪಕ ವಿದ್ಯುತ್ ಪೂರೈಕೆಗೆ ಪ್ರತಿಭಟನೆ

    ಮುದಗಲ್: ಹಳ್ಳಿಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿರುವದರಿಂದ ರೈತರು ಪಟ್ಟಣದ ಜೆಸ್ಕಾಂ ಕೇಂದ್ರಕ್ಕೆ ಸೋಮವಾರ ಪ್ರತಿಭಟನೆ ನಡೆಸಿ ಜೆಸ್ಕಾಂ ಇಲಾಖೆ ಸಿಬ್ಬಂದಿಗಳಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ತಲೆಮೇಲೆ ಐಸ್ ಇಟ್ಟುಕೊಂಡು ಪ್ರತಿಭಟನೆ

    ಮಳೆ ಇಲ್ಲದೆ ಬಿತ್ತಿದೆ ಬೆಳೆ ಒಣಗುತ್ತಿವೆ. ಪಂಪ್ ಸೆಟ್ ಮೂಲಕ ನೀರು ಹಾಯಿಸಿ ಕೈಗೆ ಬಂದ ಬೆಳೆ ಬದುಕಿಸಿಕೊಳ್ಳಬೇಕು ಎಂದರೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಸಂಕಷ್ಟ ಅನುಭವಿಸುವಂತ ಪರಸ್ಥಿತಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಪಂಪ್ ಸೆಟ್ ಮೋಟರ್ ಸ್ಟಾರ್ಟ್ ಆಗಬೇಕಾದರೆ ಮೂರು ಪೇಸ್ ವಿದ್ಯುತ್ ಅವಶ್ಯಕ. ಆದರೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶದಂತೆ ನಡೆದುಕೊಳ್ಳದೆ ಮನಸ್ಸೊ ಇಚ್ಚೆ ಕರೆಂಟ್ ತೆಗೆಯುತಿದ್ದಾರೆ ಎಂದು ಬನ್ನಿಗೋಳ, ಜಾನತಾಪೂರು, ಹೀರೆಯರದಿಹಾಳ, ಚಿಕ್ಕಯರದಿಹಾಳ, ಕೆ.ಮರಿಯಮ್ಮನಹಳ್ಳಿ, ಬಗಡಿತಾಂಡ, ಆಮದಿಹಾಳ ಗ್ರಾಮದ ರೈತರು ಆರೋಪಿಸಿದರು.

    ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮುತ್ತುನಾಥ, ಶಿವನಗೌಡ ಜನತಾಪೂರು, ಕೇಶಪ್ಪ ಮರಿಯಮ್ಮನಹಳ್ಳಿ, ಗೌಡಪ್ಪ ಯರದಿಹಾಳ, ರಮೇಶ ಚೌಡಿ, ಜನತಾಪೂರು, ಕಲ್ಲಪ್ಪ ಯರದಿಹಾಳ, ಪ್ರಕಾಶ ಮರಿಯಮ್ಮನಹಳ್ಳಿ, ಕುಪ್ಪಣ್ಣ ಯರದಿಹಾಳ, ಶಿವಕುಮಾರ ಯರದಿಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts