More

    ನಾಡಿನ ಆದರ್ಶ ವಿದ್ಯಾಕೇಂದ್ರ ಜೆಎಸ್‌ಎಸ್

    ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿಗೆ ಭವ್ಯ ಪರಂಪರೆಯ ಇತಿಹಾಸವಿದೆ. ಗಾಂಽತತ್ವ ಪ್ರತಿಪಾದಕ, ಸ್ವಾತಂತ್ರ‍್ಯ ಹೋರಾಟದ ನೇತಾರ, ಶಿಕ್ಷಣತಜ್ಞ ಶ್ರೀ ಹುಕ್ಕೇರಿಕರ್ ರಾಮರಾಯರಿಂದ ೧೯೪೪ರಲ್ಲಿ ಸ್ಥಾಪಿತವಾದ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಅಪೇಕ್ಷೆಯ ಮೇರೆಗೆ ಜನತಾ ಶಿಕ್ಷಣ ಸಮಿತಿಯನ್ನು ೧೯೭೩ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಲಾಯಿತು. ಅಂದಿನಿAದ ಜೆಎಸ್‌ಎಸ್ ನಾಡಿನ ಆದರ್ಶ ವಿದ್ಯಾಕೇಂದ್ರವಾಗಿ ಬೆಳೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
    ನಗರದ ವಿದ್ಯಾಗಿರಿ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯು ೫೦ ವರ್ಷ ಪೂರೈಸಿದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
    ಅನ್ನದಾನ ಕ್ಷಣಿಕ ತೃಪ್ತಿ ನೀಡಿದರೆ, ವಿದ್ಯಾದಾನ ಜೀವನದುದ್ದಕ್ಕೂ ಇರುವಂಥದ್ದು. ಹೆಗ್ಗಡೆಯವರು ೧೯೭೩ರ ಅ. ೧೮ರಂದು ಜೆಎಸ್‌ಎಸ್ ಸುಪರ್ದಿಗೆ ತೆಗೆದುಕೊಂಡÀÄ ಅದರ ಜವಾಬ್ದಾರಿಯನ್ನು ಪ್ರೊ. ನ. ವಜ್ರಕುಮಾರ ಅವರಿಗೆ ವಹಿಸಿದರು. ಸಮಿತಿಯ ವಿವಿಧ ಶಿಕ್ಷಣ ಸಂಸ್ಥೆಗಳು ಹಂತಹAತವಾಗಿ ಬೆಳೆಯುತ್ತ ಧಾರವಾಡಕ್ಕೆ ವಿದ್ಯಾಕಾಶಿ ಎಂಬ ಹೆಸರು ಬರಲು ಕಾರಣವಾದರು. ಎಲ್ಲ ಸಾಧನೆಗಳ ಹಿಂದೆ ಪ್ರೇರಕಶಕ್ತಿಯಾಗಿ ನಿಂತಿರುವ ಮಾತೋಶ್ರೀ ಹೇಮಾವತಿ ಹೆಗ್ಗಡೆಯವರ ಶ್ರಮ ಮರೆಯುವಂತಿಲ್ಲ ಎಂದರು.
    ಜೆಎಸ್‌ಎಸ್ ನಂತರ ಖಾವಂದರು ಎಸ್.ಡಿ.ಎಂ ಇಂಜನಿಯರಿAಗ್, ಡೆಂಟಲ್, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಐ.ಟಿ.ಐ ಸಂಸ್ಥೆಗಳನ್ನು ಸ್ಥಾಪಿಸಿ ಧಾರವಾಡವನ್ನು ಶೈಕ್ಷಣಿಕ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅಲ್ಲದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಟ್ಟಡ ಸ್ಥಾಪಿಸಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ, ಸ್ವಾವಲಂಬಿ ಜೀವನ ನಡೆಲು ನೆರವಾಗಿದ್ದಾರೆ ಎಂದರು.
    ರಾಜ್ಯದ ದಿನಪತ್ರಿಕೆ ಹಾಗೂ ಸುದ್ದಿವಾಹಿನಿಯು ಇಂಜನೀಯರಿAಗ್ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿಗೆ ನೀಡಿದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿಯನ್ನು ಪ್ರಾಚಾರ್ಯ ಮಹಾವೀರ ಉಪಾಧ್ಯೆ ಅವರಿಗೆ ಡಾ. ಅಜಿತ ಪ್ರಸಾದ ಹಸ್ತಾಂತರಿಸಿದರು.
    ಜೆಎಸ್‌ಎಸ್‌ನ ಆರ್ಥಿಕ ಸಂಶೋಧನಾ ಕೇಂದ್ರದ ನಿರ್ದೇಶಕಿ ಜ್ಯೋತಿ ಹಳ್ಳದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಉಪಾಧ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್ ವಂದಿಸಿದರು. ಎಲ್ಲ ಅಂಗಸAಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts