More

    ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ

    ಅಳವಂಡಿ: ಪ್ರಯತ್ನದಲ್ಲಿ ದೇವರನ್ನು ಕಾಣಬೇಕು ಅಂದಾಗ ಮಾತ್ರ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀ ಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಸ್ವಾಮೀಜಿ ಹೇಳಿದರು.

    ಗ್ರಾಮದ ರಾಜಾಭಾಗ ಸವಾರ (ಯಮನೂರ)ದರ್ಗಾದ ಉರುಸ್ ಅಂಗವಾಗಿ ನಡೆದ ಧಾರ್ಮಿಕ ಸಭೆ, ಜಾನಪದ ಸಂಗೀತ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.

    ಕೊಂಬಳಿ ಚೌಕಿಮಠದ ಗಾಡಿತಾತಾ ಮಾತನಾಡಿ, ಜಾತಿ-ಮತ, ಭೇದ-ಭಾವ ಎಣಿಸದೇ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು. ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಉತ್ತಮ ಕೆಲಸಗಳನ್ನು ಮಾಡಬೇಕು ಎಂದರು.

    ಕೊತಬಾಳದ ಅರುಣೋದಯ ಜಾನಪದ ಕಲಾ ತಂಡದ ರಾಜಶೇಖರ ಹಿರೇಮಠ ಹಾಗೂ ಕಲಾತಂಡ ಮತ್ತು ಡಾ,ಜೀವನಸಾಬ್ ಬಿನ್ನಾಳ ಅವರಿಂದ ಜಾನಪದ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

    ಶ್ರೀ ಪಟ್ಟದ ಚಿನ್ಮಯ ಸ್ವಾಮೀಜಿ, ಬೆಳಗಟ್ಟಿಯ ಹಜರತ್ ಸೈಯದ್ ಮುಸ್ತಪಾ ಖಾದ್ರಿ, ಕವಲೂರು ಶ್ರೀ ಪಕೀರಸ್ವಾಮೀಜಿ, ಪ್ರಮುಖರಾದ ಅನ್ವರ ಗಡಾದ, ಡಾ.ಸಿಧ್ಧಲಿಂಗಸ್ವಾಮೀಜಿ, ಗುರುಬಸವರಾಜ ಹಳ್ಳಿಕೇರಿ, ಮಂಜುನಾಥ, ಪಕೀರಸಾಬ್ ಹಳ್ಳಿಕೇರಿ, ಹನುಮಪ್ಪ ಮೋರನಾಳ, ಭೀಮಪ್ಪ, ಕಾಸಿಂಸಾಬ್ ಪಕೀರಸಾಬ್, ನಜರುದ್ದೀನ, ಇಸ್ಮಾಯಿಲ್, ಪ್ರಶಾಂತ, ದ್ಯಾಮಣ್ಣ, ಶಿವಪ್ಪ, ಭೀಮಪ್ಪ, ಶ್ರೀನಿವಾಸ, ಪ್ರಕಾಶ, ಅನ್ವರ, ಶಿನಪ್ಪ, ರಾಮಣ್ಣ, ಮೌಲಾಸಾಬ್, ಮಹಮದ್ ಕಾಶಿಂಸಾಬ್, ಹನುಮಂತ, ವೆಂಕರಡ್ಡಿ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts