More

    ಅದಾನಿ ಪೋರ್ಟ್ಸ್​ ಷೇರು ಭಾರೀ ಬೇಡಿಕೆ, 6 ತಿಂಗಳಲ್ಲಿ 70% ಏರಿಕೆ: ಸ್ಟಾಕ್​ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದೇಕೆ?

    ಮುಂಬೈ: ಅದಾನಿ ಸಮೂಹದ ಪ್ರಮುಖ ಕಂಪನಿಗಳಲ್ಲಿ ಒಂದಾದ ಅದಾನಿ ಪೋರ್ಟ್ಸ್ ಷೇರುಗಳ ಬೆಲೆ ಸೋಮವಾರ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆ ಬರೆದವು. ಸೋಮವಾರ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 1345 ರೂಪಾಯಿಯಲ್ಲಿ ವಹಿವಾಟು ಆರಂಭಿಸಿದವು. ಆದರೆ ಸ್ವಲ್ಪ ಸಮಯದ ನಂತರ ಈ ಷೇರುಗಳ ಬೆಲೆ ರೂ 1356.50 ತಲುಪಿತು. ಇದು ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ಆಗಿದೆ. ಇದಲ್ಲದೆ, ಸಾರ್ವಜಕಾಲಿಕ ಗರಿಷ್ಠ ಬೆಲೆಯೂ ಇದಾಗಿದೆ.

    ಅದಾನಿ ಪೋರ್ಟ್ಸ್ ಷೇರಿನ ಬೆಲೆ ಏರಿಕೆಯ ಹಿಂದಿನ ಕಾರಣ ತಿಂಗಳಲ್ಲಿ ಬರುತ್ತಿರುವ ವರದಿ.

    ಷೇರು ಮಾರುಕಟ್ಟೆಗಳಿಗೆ ನೀಡಿರುವ ಮಾಹಿತಿಯಲ್ಲಿ ಅದಾನಿ ಪೋರ್ಟ್ಸ್ ಕಂಪನಿಯು ಫೆಬ್ರುವರಿ ತಿಂಗಳಿನಲ್ಲಿ ವಾರ್ಷಿಕ ಆಧಾರದ ಮೇಲೆ ಸರಕು ಪ್ರಮಾಣದಲ್ಲಿ ಶೇಕಡಾ 33 ರಷ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಫೆಬ್ರವರಿಯಲ್ಲಿ ಒಟ್ಟು 35.4 MMT (ಮಿಲಿಯನ್​ ಮೆಟ್ರಿಕ್​ ಟನ್​) ಸರಕುಗಳನ್ನು ನಿರ್ವಹಿಸಲಾಗಿದೆ ಎಂದು ಕಂಪನಿ ಹೇಳಿದೆ. ಇದು ಕಳೆದ ವರ್ಷದ ಫೆಬ್ರವರಿಗಿಂತ 33 ಶೇಕಡಾ ಹೆಚ್ಚಾಗಿದೆ.

    ಕಂಪನಿಯು ಪ್ರಸಕ್ತ ಹಣಕಾಸು ವರ್ಷದ (ಫೆಬ್ರವರಿ 2024) 11 ತಿಂಗಳವರೆಗೆ 382 MMT ಸರಕುಗಳನ್ನು ನಿರ್ವಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ 400 MMT ದಾಟುವಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಬೆಳವಣಿಗೆಯ ಪರಿಮಾಣಗಳನ್ನು ನಿರ್ವಹಿಸುವ ವಿಷಯದಲ್ಲಿ ಕಂಪನಿಯು ವಾರ್ಷಿಕ ಆಧಾರದ ಮೇಲೆ 21 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸುವಲ್ಲಿ ಇದುವರೆಗೆ ಯಶಸ್ವಿಯಾಗಿದೆ.

    ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಅದಾನಿ ಪೋರ್ಟ್ಸ್‌ನ ಷೇರುಗಳು ಏರುಪ್ರವೃತ್ತಿಯಲ್ಲಿವೆ ಎಂದು ಹೇಳಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆಯಲ್ಲಿ 1410 ರೂ. ಏರಿಕೆಯಾಗಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಶೇಕಡಾ 70 ರಷ್ಟು ಲಾಭ ಗಳಿಸಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಅದಾನಿ ಪೋರ್ಟ್ಸ್ ಷೇರುಗಳ ಬೆಲೆಗಳು 94 ಪ್ರತಿಶತದಷ್ಟು ಜಿಗಿತವನ್ನು ಕಂಡಿವೆ. ಕಂಪನಿಯ 52 ವಾರದ ಕನಿಷ್ಠ ಷೇರು ಬೆಲೆ ಪ್ರತಿ ಷೇರಿಗೆ 571.35 ರೂ. ಇದೆ.

    ಶನಿವಾರದ ವಿಶೇಷ ಟ್ರೇಡಿಂಗ್​: ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್​ ಷೇರು ಬೆಲೆಗಳಲ್ಲಿ ದಾಖಲೆ

    ಅಲ್ಪಾವಧಿಗೆ ಪಿಎಸ್​ಯು ಸ್ಟಾಕ್​ ಆಯ್ಕೆ: ತಜ್ಞರ ಟಾರ್ಗೆಟ್​ ಪ್ರೈಸ್, ಸ್ಟಾಪ್‌ ಲಾಸ್ ಹೀಗಿದೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts