More

    ಆಲೂರಿನಲ್ಲಿ ಜನತಾ ನ್ಯಾಯಾಲಯ

    ಆಲೂರು : ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳು ರಾಜೀ ಪಂಚಾಯಿತಿ ಮೂಲಕ ಇತ್ಯರ್ಥವಾದರೆ ಸಾಮಾಜಿಕ ಸೌಹಾರ್ದಕ್ಕೆ ಪೂರಕವಾಗುತ್ತದೆ ಎಂದು ಕಿರಿಯ ನ್ಯಾಯಾಧೀಶೆ ಎಂ. ಸಿ. ನಿರ್ಮಲಾ ಹೇಳಿದರು. ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ನ್ಯಾಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನತಾ ನ್ಯಾಯಾಲಯದಲ್ಲಿ ಅವರು ಮಾತನಾಡಿದರು.
    ರಾಜೀ ತೀರ್ಮಾನದಲ್ಲಿ ವ್ಯತ್ಯಾಸಗಳುಂಟಾದರೆ ಇದೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯ ಪಡೆದುಕೊಳ್ಳಲು ಅವಕಾಶವಿದೆ. ಜನತಾ ನ್ಯಾಯಾಲಯದ ಸೇವೆಗಳಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
    ಪ್ರಕರಣಗಳು ಮುನ್ನಡೆಯುತ್ತಿದ್ದರೆ ಕಕ್ಷೀದಾರರು ಕೋರ್ಟಿಗೆ ಅಲೆದಾಡುವುದರಲ್ಲೇ ಹೈರಾಣ ಆಗುತ್ತಾರೆ. ಜನರಿಗೆ ನೆಮ್ಮದಿ ನೀಡುವ ಉದ್ದೇಶದಿಂದ ಉಚ್ಛ ನ್ಯಾಯಾಲಯವು ಜನತಾ ನ್ಯಾಯಾಲಯವನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಜನತಾ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು. ಇಲ್ಲಿ ನೀಡುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಈ ತೀರ್ಪು ಅಂತಿಮವಾಗಿರುತ್ತದೆ. ಕಕ್ಷಿದಾರರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
    ಜನತಾ ನ್ಯಾಯಾಲಯದಲ್ಲಿ ಸಿವಿಲ್-18, ಕ್ರಿಮಿನಲ್-179, ಎನ್‌ಐ -24 ಸೇರಿ ಒಟ್ಟು 221 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ, ಸಂಧಾನ ವಕೀಲರಾದ ನಂದಿನಿ, ಬಿ. ಮಂಜುನಾಥ. ಎಂ. ಸಿ. ರಶ್ಮಿ, ಎಚ್. ಡಿ. ಮಧು, ಎಂ. ಎಸ್. ಮಹೇಶ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts