More

    ಕ್ರಿಶ್ಚಿಯನ್​-ಸಿಖ್​ ಸಂಪ್ರದಾಯದಂತೆ ನಟಿ ತಾಪ್ಸಿ ಪನ್ನು ಮದುವೆ

    ಬೆಂಗಳೂರು: ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜೊತೆ ಕ್ರಿಶ್ಚಿಯನ್​ ಹಾಗೂ ಸಿಖ್​ ಸಂಪ್ರದಾಯದಂತೆ ಅವರು ಮದುವೆ ಆಗಲಿದ್ದಾರೆ.

    ಕಳೆದ 10 ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಸ್​ ಬೋ ಪ್ರೀತಿಸುತ್ತಿದ್ದಾರೆ.  ಮಥಾಯಸ್​ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ತಾಪ್ಸಿ ಪನ್ನು ಅವರದ್ದು ಸಿಖ್​ ಧರ್ಮ. ಹಾಗಾಗಿ ಅವರಿಬ್ಬರ ಮದುವೆಯನ್ನು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಸಲು ನಿರ್ಧರಿಸಲಾಗಿದೆ.

    ಕ್ರಿಶ್ಚಿಯನ್​-ಸಿಖ್​ ಸಂಪ್ರದಾಯದಂತೆ ನಟಿ ತಾಪ್ಸಿ ಪನ್ನು ಮದುವೆ

    ಕೇವಲ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಲು ಅವರು ನಿರ್ಧರಿಸಿದ್ದಾರೆ. ಬಾಲಿವುಡ್​ ಮಂದಿಯನ್ನು ಆಹ್ವಾನಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಉದಯಪುರದಲ್ಲಿ ಅವರ ಮದುವೆ ನಡೆಯಲಿದೆ. ಮದುವೆಯ ಬಗ್ಗೆ ತಾಪ್ಸಿ ಪನ್ನು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

    ಕ್ರಿಶ್ಚಿಯನ್​-ಸಿಖ್​ ಸಂಪ್ರದಾಯದಂತೆ ನಟಿ ತಾಪ್ಸಿ ಪನ್ನು ಮದುವೆ

    ತಾಪ್ಸಿ ಪನ್ನು ಅವರಿಗೆ ಈಗ 36 ವರ್ಷ ವಯಸ್ಸು. 2010ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts