ಸಿನಿಮಾ

ತಾಯಿ ಆಗುತ್ತಿರುವ ಸಂತೋಷದಲ್ಲಿ ನಟಿ ಸ್ನೇಹಾ ಆಚಾರ್ಯ; ಬೇಬಿ ಬಂಪ್ ಫೋಟೋ ವೈರಲ್​​

ಬೆಂಗಳೂರು: ನಟಿ ಮತ್ತು ಬಿಗ್​ಬಾಸ್​​ ಕನ್ನಡ ಸೀಸನ್ 6ರ ಸ್ಪರ್ಧಿಯಾಗಿದ್ದ ಸ್ನೇಹಾ ಆಚಾರ್ಯ, ರಯಾನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಾವು ತಾಯಿ ಆಗುತ್ತಿರುವ ವಿಚಾರವಾವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ, ಬೇಬಿ ಬಂಪ್ ಫೋಟೋಶೂಟ್​​​ನ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾ ತುಂಬಾ ಹರಿದಾಡುತ್ತಿವೆ.

‘ನಮ್ಮ ಜೀವನದ ದೊಡ್ಡ ಅಡ್ವೆಂಜರ್ ಆರಂಭವಾಗಲಿದೆ’ ಎಂದು ಬರೆದುಕೊಂಡಿರುವ ಸ್ನೇಹಾ ನೀಲಿ ಬಣ್ಣದ ಗೌನ್‌ನ ಫೋಟೋ ಅಪ್ಲೋಡ್ ಮಾಡಿದ್ದಾರೆ. ‘ನಮ್ಮೊಳಗೆ ಒಂದು ಜೀವನ ಹುಟ್ಟಿ ಬೆಳೆಯುತ್ತಿದೆ ಅಂದ್ರೆ ಆ ಸುಂದರ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಆಗಲ್ಲ. ಮ್ಯಾಜಿಕಲ್ ಕ್ಷಣವನ್ನು ಎಂಜಾಯ್ ಮಾಡುತ್ತಿರುವೆ’ ಎಂದು ಸ್ನೇಹಾ ಹೇಳಿದ್ದಾರೆ.

ಕಪಲ್ ಯೋಗ ಪೋಸ್‌ಗಳ ರೀತಿಯಲ್ಲಿ ಶ್ವೇತಾ ಶೂಟ್ ಮಾಡಿಸಿದ್ದಾರೆ. ಕಪ್ಪು ಬಣ್ಣದ ಬಾಡಿ ಫಿಟ್ ಸೂಟ್‌ ಧರಿಸಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್​ ಮಾಡುವ ಮೂಲಕವಾಗಿ ಶುಭಕೋರುತ್ತಿದ್ದಾರೆ.

2018ರಲ್ಲಿ ನ್ಯೂಯಾರ್ಕ್‍ನ ರಾಯನ್ ಕೊಪ್ಕೊ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮಗುವಿನ ನೀರಿಕ್ಷೆಯಲ್ಲಿ ನಟಿ ಇದ್ದಾರೆ.

ರಾಜ್ಯದಲ್ಲಿ ಬಿಸಿಗಾಳಿ ಆತಂಕ; ಬಿಸಿಲಿನ ಝಳಕ್ಕೆ ಸುಸ್ತಾದ ಜನ

Latest Posts

ಲೈಫ್‌ಸ್ಟೈಲ್