More

    ತುಂಬು ಗರ್ಭಿಣಿ ಸಂಜನಾ ತಲೆ ಬೋಳಿಸಿಕೊಂಡಿದ್ದಾರೆ! ಆದರೆ, ನೆಟ್ಟಿಗರಿಗೆ ಏನೋ ಅನುಮಾನ?

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರು ಈಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮುಂಬರುವ ತಿಂಗಳಲ್ಲಿ ಮಗುಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ, ಸದ್ಯಕ್ಕೆ ಅಭಿನಯ ಬಿಟ್ಟು ನಟಿ ಸಂಜನಾ ತಮ್ಮ ಕುಟುಂಬದ ಜತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇನ್ನು, ಇತ್ತೀಚಿನ ದಿನಗಳಲ್ಲಿ ನಟಿ ಕೇವಲ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ, ಡ್ರಗ್ಸ್ ಪ್ರಕರಣ ಎಂಬಂತೆ ತಮ್ಮ ಬದುಕಿನಲ್ಲಿ ಈಗಾಗಲೇ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಂಜನಾ ಇದೀಗ ಒಂದು ಶಾಕಿಂಗ್ ಕೆಲಸ ಮಾಡಿದ್ದಾರೆ. ಹೌದು, ಈ ಬಾರಿ ಸಂಜನಾ ಅವರು ಕೇವಲ ಒಂದು ಫೋಟೋ ಶೇರ್ ಮಾಡಿಕೊಂಡು ಇಡೀ ಕರುನಾಡ ಗಮನ ಸೆಳೆದಿದ್ದಾರೆ.
    ನಟಿ ಅವರ ತಲೆ ಕೂದಲನ್ನು ದಾನ ಮಾಡಿರುವ ಬೋಳು ತಲೆಯ ಫೋಟೋವನ್ನು ಅವರ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಲ್ಲರನ್ನೂ ಶಾಕ್ ಮಾಡಿದ್ದಾರೆ. ಸಹಜವಾಗಿಯೇ, ಸಂಜನಾಳ ಈ ಲುಕ್ ಕಂಡವರು, ಅವರಿಗೆ ಏನಾಯ್ತು? ಎಂದು ಅಚ್ಚರಿಯನ್ನು ಕಾಮೆಂಟ್​ಗಳಲ್ಲಿ ಸಹ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ, ಸಂಜನಾ ಹೀಗೆ ತಮ್ಮ ತಲೆ ಕೂದಲನ್ನು ದಾನ ಮಾಡಲು ಕಾರಣ ಇದೆ. ನಟಿ ತಾನೇ ಸ್ವಂತ ಇಚ್ಛೆಯಿಂದ ಕೂದಲು ದಾನ ಮಾಡಿದ್ದಾರಂತೆ. ಸಂಜನಾ ಬದುಕಲ್ಲಿ ಈಗ ಉತ್ತಮವಾದ ಸಂಗತಿಗಳು ನಡೆಯುತ್ತಿವೆಯಂತೆ. ಹಾಗಾಗಿ, ಅವರು ಭಗವಂತನಿಗೆ ಧನ್ಯವಾದ ಹೇಳಲು ಈ ರೀತಿ ಕೂದಲು ದಾನ ಮಾಡಿದ್ದಾರೆ ಎಂದು ಅವರ ಫೋಟೋಗೆ ನಟಿ ಕೊಟ್ಟ ಕ್ಯಾಪ್ಷನ್​ನಲ್ಲಿದೆ.
    ಫೋಟೋ ಹಂಚಿಕೊಂಡ ಸಂಜನಾ, “ಸೌಂದರ್ಯವು ನೋಡುಗರ ದೃಷ್ಟಿಯಲ್ಲಿದೆ. ನಾನು ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣಮಾಡಲು ನನ್ನ ತಲೆ ಕೂದಲನ್ನು ದಾನ ಮಾಡಿದ್ದೇನೆ. ಬದುಕಿನಲ್ಲಿ ಅನೇಕ ಕಷ್ಟಗಳನ್ನು ದಾಟಿದ ನಂತರ, ಈಗ ಜೀವನವು ಮತ್ತೊಮ್ಮೆ ಸುಂದರವಾಗಿದೆ ಅನಿಸುತ್ತೆ. ನನ್ನ ಜೀವನದ ಈ ಹಂತಕ್ಕಾಗಿ ನಾನು ದೇವರಿಗೆ ಎಷ್ಟೇ ಧನ್ಯವಾದ ಹೇಳಿದರು ಸಾಲದು. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ“, ಎಂದು ಬರೆದುಕೊಂಡಿದ್ದಾರೆ. ಸದ್ಯ, ನಟಿಯ ಈ ತಲೆ ಮೇಲೆ ಕೂದಲು ಇಲ್ಲದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ನಡುವೆ ನಟಿಯ ಈ ಫೋಟೋ ಫೇಕ್ ಮತ್ತು ಎಡಿಟಿಂಗ್ ಮಾಡಲಾದ ಫೋಟೋ ಎಂದು ಹಲವು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

    ತುಂಬು ಗರ್ಭಿಣಿ ಸಂಜನಾ ತಲೆ ಬೋಳಿಸಿಕೊಂಡಿದ್ದಾರೆ! ಆದರೆ, ನೆಟ್ಟಿಗರಿಗೆ ಏನೋ ಅನುಮಾನ?

    ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಮೆಗಾ ಕುಟುಂಬದ ಕುಡಿ! ತಂದೆ ನಾಗಬಾಬು ಹೇಳಿದ್ದೇನು?

    ಇದು ಎಂಥ ಕಾಂಬಿನೇಷನ್! ತ್ರಿವಿಕ್ರಮ್ ಚಿತ್ರದಲ್ಲಿ ಪ್ರಿನ್ಸ್​ ಮಹೇಶ್​​ಗೆ ಕನ್ನಡದ ರಿಯಲ್ ಸ್ಟಾರ್ ಅಣ್ಣ?

    ಅಬ್ಬಬ್ಬಾ… ಹೇಗಿವೆ ಗೊತ್ತಾ ‘ಕೆಜಿಎಫ್​-2’ ಫ್ಯಾನ್ ಮೇಡ್ ಪೋಸ್ಟರ್​ಗಳು? #RockyBhaiFandom

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts