More

    ಪಿಪಿಇ ಕಿಟ್​ ಧರಿಸಿರುವ ದಕ್ಷಿಣ ಭಾರತದ ಈ ಪ್ರಖ್ಯಾತ ನಟಿ ಯಾರೆಂದು ಗುರುತಿಸುವಿರಾ?

    ಕೊಚ್ಚಿ: ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣಗಳು ಮತ್ತೆ ಬಿರುಸು ಪಡೆದುಕೊಳ್ಳುತ್ತಿವೆ. ಅನ್​ಲಾಕ್​ 5 ಮಾರ್ಗದರ್ಶಿ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿರುವುದು ಸಿನಿ ರಸಿಕರಿಗೆ ಖುಷಿಯ ವಿಚಾರ.

    ಆದರೆ, ಕರೊನಾ ಕಾಟ ಇನ್ನು ಕಡಿಮೆಯಾಗದಿರುವುದು ಆರೋಗ್ಯ ಮೇಲಿನ ಕಳವಳಕ್ಕೆ ಕಾರಣವಾಗಿದೆ. ಚಿತ್ರೀಕರಣ ವೇಳೆ ಕಲಾವಿದರಿಗೆ ಕರೊನಾ ಅಂಟಿಕೊಂಡಿರುವುದು ವರದಿಯಾಗಿದೆ. ಹೀಗಾಗಿ ಸಿನಿಮಾ ಶೂಟಿಂಗ್​ನಲ್ಲಿ ಭಾಗವಹಿಸುವವರು ತುಂಬಾ ಎಚ್ಚರಿಕೆ ವಹಿಸಬೇಕಾಗಿದ್ದು, ಇದಕ್ಕೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ಮೀನಾ ಅವರು ಮಾದರಿಯಾಗಿದ್ದಾರೆ.

    ಹೌದು, ಈಗಾಗಲೇ ಸೂಪರ್​ ಡೂಪರ್​ ಹಿಟ್​ ಆಗಿ ಪಂಚ ಭಾಷೆಗಳಲ್ಲಿ ರಿಮೇಕ್​ ಆಗಿರುವ ದೃಶ್ಯಂ ಚಿತ್ರದ ಮುಂದುವರಿದ ಭಾಗದ ಶೂಟಿಂಗ್​ ಆರಂಭವಾಗಿದೆ. ಮಲಯಾಳಂ ನಟ ಮೋಹನ್​ ಲಾಲ್​ ಅಭಿನಯದ ಕ್ರೈಂ ಥ್ರಿಲ್ಲರ್​ ದೃಶ್ಯಂ-2 ಚಿತ್ರದ ಶೂಟಿಂಗ್​ ಶುರುವಾಗಿರುವ ಹಿನ್ನೆಲೆಯಲ್ಲಿ ನಟಿ ಮೀನಾ ಚೆನ್ನೈನಿಂದ ಕೊಚ್ಚಿಗೆ ತೆರಳಿ ಚಿತ್ರತಂಡ ಸೇರಿಕೊಂಡಿದ್ದಾರೆ. ಕರೊನಾ ಹೆಚ್ಚಳವಾಗುತ್ತಿರುವ ಭಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಂಗಳವಾರ ಪಿಪಿಇ ಕಿಟ್ ಹಾಗೂ ಫೇಸ್​ ಶೀಲ್ಡ್​​ ಧರಿಸಿಯೇ ಪ್ರಯಾಣ ಮಾಡಿದರು.

    ಇದನ್ನೂ ಓದಿ: ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್

    ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಮೀನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶಕ್ಕೆ ಪ್ರಯಾಣ ಮಾಡುತ್ತಿರುವಂತೆ ಭಾಸವಾಗುತ್ತಿದೆ. ನಾನು ಯುದ್ಧಕ್ಕೆ ಹೋಗುತ್ತಿರುವಂತೆ ಅನಿಸುತ್ತಿದೆ. ಏಳು ತಿಂಗಳ ಬಳಿಕ ಪ್ರಯಾಣ ಮಾಡುತ್ತಿದ್ದೇನೆ. ನಿಶ್ಯಬ್ಧವಾದ ಹಾಗೂ ನಿರ್ಜನ ವಿಮಾನ ನಿಲ್ದಾಣವನ್ನು ನೋಡಿ ಆಶ್ಚರ್ಯವಾಗುತ್ತಿದೆ. ಅನೇಕರು ನನ್ನಂತೆ ಧರಿಸಿಲ್ಲವೆಂದು ನೋಡಿ ಹೆಚ್ಚು ಆಶ್ಚರ್ಯವಾಯಿತು. ಇದು ಅತ್ಯಂತ ಅಹಿತಕರ ಉಡುಪು ಎಂದು ನಾನು ಹೇಳಲೇಬೇಕು ಎಂದಿದ್ದಾರೆ.

    ತಂಪಾದ ಅಥವಾ ಏರ್​ ಕಂಡೀಷನ್​ ವಾತಾವರಣದಲ್ಲಿ ಇದ್ದರೂ ಪಿಪಿಇ ಕಿಟ್​ ಧರಿಸಿದ್ದರೆ ಬಿಸಿ ಅನಿಸುತ್ತದೆ. ನಮ್ಮ ಮುಖವನ್ನು ಒರೆಸಿಕೊಳ್ಳಲು ಆಗುವುದಿಲ್ಲ. ಇದನ್ನು ಧರಿಸಿ ದಿನವೀಡಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿಗೆ ಹ್ಯಾಟ್ಸ್​ ಆಫ್​ ಎಂದಿರುವ ಮೀನಾ, ಪಿಪಿಇ ಸಾಕಷ್ಟು ತೊಂದರೆ ಅನುಭವಿಸಿದ್ದರೂ ನಮ್ಮ ರಕ್ಷಣೆ ಮಾಡಿದ್ದಾರೆ. ನಿಮ್ಮ ಮೇಲಿನ ಗೌರವ ಇನ್ನು ಹೆಚ್ಚಾಯಿತು. ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಎಂದು ಮೀನಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಕೋವಿಡ್​ ಶಿಷ್ಟಾಚಾರದಂತೆ ದೃಶ್ಯಂ 2 ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್​ನಲ್ಲಿ ಭಾಗವಹಿಸುವ ಎಲ್ಲರಿಗೂ ಕೋವಿಡ್​ ಪರೀಕ್ಷೆ ಕಡ್ಡಾಯವಾಗಿದೆ ಎಂದು ಚಿತ್ರತಂಡ ತಿಳಿಸಿದೆ. (ಏಜೆನ್ಸೀಸ್​)

    ಚಂದನಾ ಬಣ್ಣದ ಕನಸು ಸೀರಿಯಲ್ಲೂ ಬೇಕು, ಸಿನಿಮಾನೂ ಇಷ್ಟ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts