More

    ಸೋಲದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ನಟಿ ಲೀಲಾವತಿ ಅಂತ್ಯಕ್ರಿಯೆ – ಸಹಸ್ರಾರು ಮಂದಿಯಿಂದ ಪಾರ್ಥೀವ ಶರೀರದ ದರ್ಶನ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮೃತಪಟ್ಟ ಕನ್ನಡದ ಹಿರಿಯ ನಟಿ ಲೀಲಾವತಿ(85) ಅವರ ಅಂತ್ಯಕ್ರಿಯೆ ನೆಲಮಂಗಲ ತಾಲೂಕು ಸೋಲದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ಶನಿವಾರ ಸಂಜೆ ನಡೆಯಲಿದೆ.

    ಇದನ್ನೂ ಓದಿ: ಲೀಲಾವತಿ ನೆನದು ಅಭಿಮಾನಿ ಭಾವುಕ ಮಾತು
    ಸದ್ಯ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದೆ. ಮುಂಜಾನೆ 5 ಗಂಟೆಯಿಂದ ಸಾರ್ವಜನಿಕರು ಮತ್ತು ಅವರ ಹಿತೈಷಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಪುತ್ರ ವಿನೋದ್ ರಾಜ್, ಕುಟುಂಬಸ್ಥರು, ಹಿತೈಷಿಗಳು ಹಾಜರಿದ್ದರು. ಅಗಲಿದ ಹಿರಿಯ ಚೇತನದ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ ಯುವರಾಜ್ ಆಗಮಿಸಿದ್ದರು. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಶನಿವಾರ ಅಂತಿಮ ದರ್ಶನ ಪಡೆದರು.

    ವಿನೋದ್ ರಾಜ್ ಅವರ ಮದುವೆ ವಿಚಾರವಾಗಿ ಈ ಹಿಂದೆ ಹಲವಾರು ಗೊಂದಲಗಳು ಮೂಡಿದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.

    ಇನ್ನು ಮಧ್ಯಾಹ್ನ 2.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಇಡಲಾಗುತ್ತಿದ್ದು, ನಟ ಶಿವರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ ಮತ್ತಿತರರು ಪಾರ್ಥಿವ ಶರೀರದ ದರ್ಶನವನ್ನು ಪಡೆದಿದ್ದಾರೆ.

    ಸರಳ ಮತ್ತು ತುಂಬು ಜೀವನ ನಡೆಸಿ 85ನೇ ವಯಸ್ಸಿಗೆ ನಿಧನರಾಗಿರುವ ಲೀಲಾವತಿ 600 ಸಿನಿಮಾಗಳಲ್ಲಿ ನಟಿಸಿದ್ದು, ಹಣಕಾಸು ವಿಷಯದಲ್ಲಿ ಅಷ್ಟೇನು ಸ್ಥಿತಿವಂತರಾಗಿರದಿದ್ದರೂ, ಆಸ್ಪತ್ರೆ, ಪಶುಆಸ್ಪತ್ರೆ ಕಟ್ಟಿಸಿಕಿಟ್ಟಿರುವುದು ಸೇರಿ ಹಲವು ಸಾಮಾಜಮುಖಿ ಕೆಲಸಗಳನ್ನು ಮಾಡಿಸಿದ್ದಾರೆ. ಪುತ್ರ ನಟ ವಿನೋದ್ ರಾಜ್, ಸೊಸೆ, ಮೊಮ್ಮೊಗ ಸೇರಿ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

    ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ, ಸೊಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts