More

    ಮನೆಗೆ ಬರೋವರೆಗೂ ನಿಮಗೆ ಗೊತ್ತಾಗಲ್ಲ, ಅದೆಷ್ಟು ಕೆಟ್ಟದ್ದು ಅಂತ!: ‘ಪ್ರೇಮ್​ ಅಡ್ಡ’ದ ಹುಡುಗಿ ಹೀಗಂದಿದ್ಯಾಕೆ?

    ಬೆಂಗಳೂರು: ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ ಎಂಬ ಗಾದೆಮಾತಿದೆ. ಲಾಕ್​ಡೌನ್​ ನಿರ್ಬಂಧವನ್ನೂ ಮೀರಿ ಅನಗತ್ಯವಾಗಿ ರಸ್ತೆಗಿಳಿದು ಬಳಿಕ ಕರೊನಾ ಸೋಂಕೇನಾದರೂ ತಗುಲಿತು ಎಂದಾದರೆ ಅಂಥವರಿಗೆ ಈ ಗಾದೆಮಾತಿನ ಅರ್ಥ ಅನುಭವಕ್ಕೆ ಬಂದು ಬಿಡುತ್ತದೆ. ಅಂಥದ್ದೊಂದು ಅನುಭವ, ‘ಪ್ರೇಮ್​ ಅಡ್ಡ’ದ ಈ ಹುಡುಗಿಗೂ ಆಗಿದೆ. ಅರ್ಥಾತ್​ ಕನ್ನಡದಲ್ಲಿ ‘ಪ್ರೇಮ್​ ಅಡ್ಡ’, ‘ಸೂಪರ್​ ರಂಗ’ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಕೃತಿ ಖರಬಂದಗೂ ಈಗ ಕೋವಿಡ್ ಸೋಂಕಿನ ತೀವ್ರತೆ ತಟ್ಟಿದೆ.

    ನಟಿ ಕೃತಿ ಖರಬಂದ ಅವರ ಮನೆಗೂ ಕೋವಿಡ್ ಮಹಾಮಾರಿ ಬಂದ ಬಗ್ಗೆ ಹೇಳಿಕೊಂಡಿದ್ದು, ಕಳೆದ 48 ಗಂಟೆಗಳ ಸಮಯ ನನಗೂ ನನ್ನ ಫ್ಯಾಮಿಲಿಗೂ ತುಂಬಾ ಸಂಕಟದ್ದಾಗಿತ್ತು. ನಿಮ್ಮ ಮನೆಗೆ ಬರುವವರೆಗೂ ಅದು ಎಷ್ಟು ಕೆಟ್ಟದ್ದು ಎಂದು ನಿಮಗೆ ಗೊತ್ತಾಗುವುದಿಲ್ಲ ಎಂಬುದಾಗಿ ಅವರು ಕರೊನಾ ಸೋಂಕಿನ ಸಂಕಟದ ತೀವ್ರತೆ ಕುರಿತು ಹೇಳಿಕೊಂಡಿದ್ದಾರೆ.
    ಮುಂದಿನ ಸಲ ನೀವು ಮನೆಯಿಂದ ಹೊರಗೆ ಹೆಜ್ಜೆ ಇಡಬೇಕು ಎಂದರೆ ಒಮ್ಮೆ ಸರಿಯಾಗಿ ಯೋಚಿಸಿ. ಜೀವವನ್ನೇ ಅಪಾಯಕ್ಕೊಡ್ಡಿ ಹೊರಗೆ ಹೋಗಬೇಕಾದ ಅಗತ್ಯವಿದೆಯೇ ಎಂದು ಒಮ್ಮೆ ಒಂದು ಹೆಜ್ಜೆ ಹಿಂದೆ ಇಟ್ಟು ಯೋಚಿಸಿ ಎಂದು ಸಲಹೆ ನೀಡಿರುವ ಅವರು, ದಯವಿಟ್ಟು ಎಲ್ಲರೂ ಒಳಗೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲೇ ಉಳಿಯುವುದು ಎಲ್ಲರಿಗೂ ಸಿಗಲಾರದ ಐಷಾರಾಮವಾಗಿದೆ. ನಿಮ್ಮ ಸುರಕ್ಷತೆ ಹಾಗೂ ನಿಮ್ಮ ಜೀವವನ್ನು ನಿರ್ಲಕ್ಷಿಸಬೇಡಿ ಎಂಬುದಾಗಿಯೂ ಕೃತಿ ಕಿವಿಮಾತು ಹೇಳಿದ್ದಾರೆ. ‘ಚಿರು’ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಕೃತಿ ಖರಬಂದ ಬಳಿ, ‘ಪ್ರೇಮ್​ ಅಡ್ಡ’, ‘ಗಲಾಟೆ’, ‘ಸೂಪರ್​ ರಂಗ’, ‘ದಳಪತಿ’, ‘ಮಾಸ್ತಿಗುಡಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    ನಮ್ಮ ಜಿಲ್ಲೆಯಲ್ಲೂ ಆಕ್ಸಿಜನ್ ಇನ್ನೇನು ಮುಗಿಯುತ್ತಿದೆ, ಇವತ್ತು ರಾತ್ರಿಗೆ ಏನಾಗುತ್ತೋ?!: ಆತಂಕ ವ್ಯಕ್ತಪಡಿಸಿದ ಸಚಿವ..

     

    ಕರೊನಾ ಹೊಡೆತಕ್ಕೆ ಒಂದೇ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತೇ? ನಾಲ್ಕು ತಿಂಗಳಿಂದ ಏರುತ್ತಲೇ ಇದೆ ನಿರುದ್ಯೋಗ ಪ್ರಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts