More

    ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..

    ಬೆಂಗಳೂರು: ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ ಬಿಲ್​ಬೋರ್ಡ್​​ನಲ್ಲಿ ಸಾಮಾನ್ಯವಾಗಿ ಬಾಲಿವುಡ್​ ನಟಿಯರೇ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಸಲ ಎಂಬಂತೆ ಕನ್ನಡದ ನಟಿಯೊಬ್ಬರು ಅಲ್ಲಿ ಮಿಂಚಿದ್ದಾರೆ. ಹೀಗೆ ಅಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್​ವುಡ್ ನಟಿ ಮತ್ಯಾರೂ ಅಲ್ಲ, ಇತಿ ಆಚಾರ್ಯ.

    ನ್ಯೂಯಾರ್ಕ್​ನಲ್ಲಿ ಇತ್ತೀಚೆಗೆ ನಡೆದ ನ್ಯೂಯಾರ್ಕ್ ಫ್ಯಾಷನ್ ವೀಕ್​​ನಲ್ಲಿ ಭಾರತ ಮೂಲದ ಫ್ಯಾಷನ್ ಡಿಸೈನರ್ ವಿನ್ಯಾಸ ಮಾಡಿದ ದಿರಿಸನ್ನು ಇತಿ ಆಚಾರ್ಯ ಶೋ ಕೇಸ್ ಮಾಡಿದ್ದರು. ಅದನ್ನು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಪ್ರದರ್ಶಿಸುವ ಮೂಲಕ ಮೊದಲ ಬಾರಿಗೆ ಕನ್ನಡದ ನಟಿಯನ್ನು ಗುರುತಿಸಿದೆ.

    ಈ ಸಲದ ಕ್ಯಾನೆ ಫಿಲ್ಮ್​ ಫೆಸ್ಟ್ ರೆಡ್ ಕಾರ್ಪೆಟ್​​ನಲ್ಲಿ ಹೆಜ್ಜೆ ಹಾಕುವ ಮೂಲಕ ಇತಿ ಗಮನ ಸೆಳೆದಿದ್ದರು. ಇದೀಗ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​​ನಲ್ಲೂ ಕಾಣಿಸಿಕೊಳ್ಳುವ ಮೂಲಕ ಇತಿ ಒಂದೇ ವರ್ಷದಲ್ಲಿ ಎರೆಡೆರಡು ಅಂತಾರಾಷ್ಟ್ರೀಯ ವೇದಿಕೆ ಹಂಚಿಕೊಂಡ ಸಾಧನೆ ಮಾಡಿದ್ದಾರೆ.

    ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..

    ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ಭಾರತವನ್ನು ಪ್ರತಿನಿಧಿಸಿದ್ದು ಹರುಷ ತಂದಿದೆ. ಇದು ಎಂದಿಗೂ ಮರೆಯಲಾಗದ ಅದ್ಭುತ ಅನುಭವ.

    | ಇತಿ ಆಚಾರ್ಯ, ನಟಿ-ರೂಪದರ್ಶಿ

    ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..
    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಅಭಿನಯದ ‘ಕವಚ’ ಚಿತ್ರದಲ್ಲಿ ನಟಿಸಿದ್ದ ಇತಿ ಆಚಾರ್ಯ ರೂಪದರ್ಶಿ ಕೂಡ ಆಗಿದ್ದು, 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಆಗಿದ್ದರು. ಆರ್​ವಿಎಸ್​​ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ನಟನೆಯಲ್ಲೂ ನಿರತರಾಗಿದ್ದಾರೆ. ಇತಿ ನಾಯಕಿಯಾಗಿ ನಟಿಸಿರುವ ಕನ್ನಡದ ‘ಲಕ್ಷ್ಮೀಪುತ್ರ’ ಚಿತ್ರ ಬಿಡುಗಡೆ ಆಗಲಿದೆ. ಕನ್ನಡವಲ್ಲದೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ತೊಡಗಿಸಿಕೊಂಡಿದ್ದಾರೆ.

    ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts