More

    ತಾರಾವಳಿ |ಲಂಡನ್​ನಲ್ಲಿ ದೀಪಾವಳಿ: ಹರ್ಷಿಕಾ ಪೂಣಚ್ಚ

    ಈ ವರ್ಷದ ದೀಪಾವಳಿ ಕೊಂಚ ವಿಭಿನ್ನ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆ ಬದಿಗಿಟ್ಟು, ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಹಬ್ಬವನ್ನು ಚಂದನವನದ ನಟಿಯರೂ ಅಷ್ಟೇ ವಿಭಿನ್ನವಾಗಿ ಹೇಗೆ ಆಚರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

    ಈ ಸಲದ ದೀಪಾವಳಿ ನನ್ನ ಪಾಲಿಗೆ ತುಂಬ ಹೊಸತು. ಪ್ರತಿ ವರ್ಷ ಊರಲ್ಲೇ ಹಬ್ಬದಾಚರಣೆ ಮಾಡುತಿದ್ದೆ. ಈ ವರ್ಷ ಲಂಡನ್​ನಲ್ಲಿ ಆಚರಿಸುವ ಅವಕಾಶ ಸಿಕ್ಕಿದೆ. ಅದರಲ್ಲೂ ಗುಜರಾತಿ ಸಂಪ್ರದಾಯದಂತೆ ದೀಪಾವಳಿಯನ್ನು ಆಚರಿಸುವ ಕಾತರದಲ್ಲಿದ್ದೇನೆ. ಸ್ನೇಹಿತರ ಜತೆಗೆ ಈ ದೀಪಾವಳಿ ಆಚರಿಸಲು ತುಂಬ ಎಗ್ಸೈಟ್​ ಆಗಿದ್ದೇನೆ. ನಮ್ಮಲ್ಲಿನ ದೀಪಾವಳಿಗೂ ಉತ್ತರ ಭಾರತದ ದೀಪಾವಳಿಗೂ ತುಂಬ ವ್ಯತ್ಯಾಸ ಇದೆ. ಈ ಬಾರಿ ಆ ವ್ಯತ್ಯಾಸ ಏನೆಂಬುದನ್ನು ಕಂಡುಕೊಳ್ಳಲಿದ್ದೇನೆ. ಗುಜರಾತಿ ಸಮುದಾಯದವರಿಂದ ನೂರಾರು ಮಂದಿ ಒಂದೆಡೆ ಸೇರಿ ಆಚರಿಸಿಕೊಳ್ಳಲಿದ್ದೇವೆ. ದಾಂಟೆರಸ್ ನೃತ್ಯವೂ ವಿಶೇಷವಾಗಿದ್ದು, ಅದಕ್ಕೆ ಹೊಂದುವಂಥ ಕಾಸ್ಟ್ಯೂಮ್ ಸಹ ನೀಡಿದ್ದಾರೆ. ಈ ಹೊತ್ತಲ್ಲಿ ನಮ್ಮ ಊರಿನ ಹಬ್ಬದೂಟವನ್ನು ತುಂಬ ಮಿಸ್ ಮಾಡಿಕೊಳ್ಳಲಿದ್ದೇನೆ.

    | ಹರ್ಷಿಕಾ ಪೂಣಚ್ಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts