More

    ತಾರಾವಳಿ| ಕುಟುಂಬದ ಜತೆಗೆ ಹಬ್ಬದೂಟ: ಅಮೃತಾ ಅಯ್ಯಂಗಾರ್​

    ಈ ವರ್ಷದ ದೀಪಾವಳಿ ಕೊಂಚ ವಿಭಿನ್ನ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆ ಬದಿಗಿಟ್ಟು, ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಹಬ್ಬವನ್ನು ಚಂದನವನದ ನಟಿಯರೂ ಅಷ್ಟೇ ವಿಭಿನ್ನವಾಗಿ ಹೇಗೆ ಆಚರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

    ನಮ್ಮ ಮನೆಯಲ್ಲಿ ಉಳಿದ ಹಬ್ಬಗಳಿಗಿಂತ ದೊಡ್ಡ ಮಟ್ಟದಲ್ಲಿ ಆಚರಿಸುವ ಹಬ್ಬ ದೀಪಾವಳಿ. ಹದಿನೈದು ದಿನಕ್ಕೂ ಮೊದಲೇ ನಮ್ಮ ಮನೆಯಲ್ಲಿ ಸಂಭ್ರಮ ಶುರುವಾಗುತ್ತದೆ. ದೀಪಾವಳಿ ಎಂದ ತಕ್ಷಣ ನನಗೆ ಮೊದಲು ನೆನಪಾಗುವುದು ಎಣ್ಣೆ ಸ್ನಾನ. ಅದಾದ ಬಳಿಕ ಒಳ್ಳೇ ಹಬ್ಬದೂಟ. ಆರನೇ ತರಗತಿಯಲ್ಲಿ ಇದ್ದಾಗಲೇ ಪಟಾಕಿ ಹೊಡೆಯುವುದನ್ನು ಬಿಟ್ಟಿದ್ದೇನೆ. ಸುರ್​ಸುರ್​ಬತ್ತಿ ಈಗಲೂ ಹಚ್ಚುತ್ತೇನೆ. ನಮ್ಮ ಕುಟುಂಬದವರೆಲ್ಲ ಸೇರಿಬಿಟ್ಟರೆ, ದೊಡ್ಡವರು ಎಂಬುದನ್ನು ಮರೆತು ಚಿಕ್ಕ ಮಕ್ಕಳಾಗುತ್ತೇವೆ. ಎಂದಿನಂತೆ ಮನೆಯಲ್ಲಿ ಪೂಜೆ ಇದ್ದೇ ಇರುತ್ತದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಆಚರಣೆಯಲ್ಲಿ ನೀರು ತುಂಬುವ ಹಬ್ಬದಿಂದ ಶುರುವಾಗಿ, ಲಕ್ಷ್ಮೀ ಪೂಜೆಯ ಮೂಲಕ ಹಬ್ಬ ಕೊನೆಗೊಳ್ಳುತ್ತದೆ. ಹಬ್ಬದ ಪ್ರಯುಕ್ತ ವಿಶೇಷ ಅಡುಗೆ ಇದ್ದೇ ಇರುತ್ತದೆ. ಇನ್ನು ಪ್ರತಿ ವರ್ಷ ಮಂತ್ರಾಲಯಕ್ಕೆ ಹೋಗುತ್ತಿದ್ದೆ. ಈ ವರ್ಷ ಕರೊನಾ ಕಾರಣದಿಂದ ಎಲ್ಲಿಯೂ ಹೋಗುತ್ತಿಲ್ಲ. ಮನೆ ಬಳಿಯ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ.

    | ಅಮೃತಾ ಅಯ್ಯಂಗಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts