More

    ಪನಾಮಾ ಪೇಪರ್ಸ್​ ಹಗರಣದಲ್ಲಿ ಸಿಲುಕಿಕೊಂಡ ನಟಿ ಐಶ್ವರ್ಯಾ ರೈಗೆ ಇ.ಡಿ. ಪ್ರಶ್ನೆಗಳ ಸುರಿಮಳೆ; ಏನೇನು ಕೇಳಿದ್ರು? ಇಲ್ಲಿದೆ ಮಾಹಿತಿ..

    ನವದೆಹಲಿ: ಪನಾಮಾ ಪೇಪರ್ಸ್ ಹಗರಣದಲ್ಲಿ ನಟಿ ಐಶ್ವರ್ಯಾ ರೈ ಹೆಸರು ತಳುಕು ಹಾಕಿಕೊಂಡಿರುವುದು ಈಗೇನೂ ಹೊಸ ಸಂಗತಿಯಲ್ಲ. ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ಐಶ್ವರ್ಯಾಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ಜಾರಿಗೊಳಿಸಿದ್ದಷ್ಟೇ ಅಲ್ಲ, ಇದೀಗ ಹಲವಾರು ಪ್ರಶ್ನೆಗಳನ್ನು ಕೇಳಿ ಅವರಿಂದ ಸಾಕಷ್ಟು ಮಾಹಿತಿ ಪಡೆಯುವ ಯತ್ನವೂ ಆಗಿದೆ.

    ಅಂದಹಾಗೆ ಐಶ್ವರ್ಯಾ ರೈಗೆ ಎದುರಾದ ಪ್ರಶ್ನೆಗಳು ಯಾವುವು ಎಂಬುದು ಬಹಿರಂಗಗೊಂಡಿದ್ದು, ಆ ಪೈಕಿ ಇವು ಅವರು ಎದುರಿಸಿದ ಕೆಲವು ಪ್ರಶ್ನೆಗಳು ಎನ್ನಲಾಗಿದೆ.

    • ಮೊಸಾಕ್​ ಫೊನ್ಸೆಕಾ ಕಂಪನಿಯ ನಿರ್ದೇಶಕರಲ್ಲಿ ನೀವು ಮಾತ್ರವಲ್ಲ, ನಿಮ್ಮ ತಂದೆ ಕೃಷ್ಣ ರೈ, ತಾಯಿ ಕವಿತಾ ರೈ, ಸಹೋದರ ಆದಿತ್ಯ ರೈ ಕೂಡ ಇದ್ದೀರಿ. ಈ ಬಗ್ಗೆ ಏನಂತೀರಿ?
    • ಮೊಸಾಕ್​ ಫೊನ್ಸೆಕಾ ಕಂಪನಿ ನೋಂದಣಿ ಆಗಿರುವ ಕಾನೂನು ಸಂಸ್ಥೆ ಯಾವುದು ಗೊತ್ತಾ?
    • ಪ್ರತಿ ನಿರ್ದೇಶಕರೂ 12,500 ಷೇರುಗಳನ್ನು ಹೊಂದಿದ್ದಾರೆ. ನೀವು ನಿರ್ದೇಶಕರಾಗಿಯೂ ಯಾಕೆ ಷೇರುದಾರರಾದಿರಿ?
    • 2005ರಲ್ಲಿ ನೀವು ಷೇರುದಾರರಾದಿರಿ, ಆದರೆ ಆ ನಂತರ ಅಂದರೆ 2008ರಲ್ಲಿ ಕಂಪನಿ ಯಾಕೆ ನಿಷ್ಕ್ರಿಯವಾಯಿತು?
    • ಆರ್ಥಿಕ ವಹಿವಾಟಿಗೆ ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಅನುಮತಿ ಇತ್ತೇ?
    • 2005ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​​​ನಲ್ಲಿ ನೋಂದಣಿ ಆಗಿದ್ದ ಅಮಿಕ್ ಪಾರ್ಟ್​ನರ್ಸ್​ ಕಂಪನಿ ಜತೆ ನಿಮ್ಮ ಸಂಬಂಧ ಏನು?

    – ಹೀಗೆ ಐಶ್ವರ್ಯಾ ರೈ ಪ್ರಶ್ನೆಗಳ ಸುರಿಮಳೆಗಳನ್ನೇ ಎದುರಿಸಿದ್ದು, ಈ ಸಂಬಂಧ ಅವರು ಜಾರಿ ನಿರ್ದೇಶನಾಲಯದವರಿಗೆ ಏನೆಂದು ಉತ್ತರಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

    ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts