More

    ಬಿಟೌನ್​ನಲ್ಲಿ ಮತ್ತೆ ಐಂದ್ರಿತಾ: ಅ.1 ಕ್ಕೆ ರಾವಣ್ ಲೀಲಾ ಚಿತ್ರ ಬಿಡುಗಡೆ

    ಬೆಂಗಳೂರು: ಅರ್ಬಾಜ್ ಖಾನ್ ಜತೆಗೆ ‘ಮೈ ಜರೂರ್ ಆವುಂಗಾ’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಐಂದ್ರಿತಾ, ಅದಾದ ಬಳಿಕ ‘ದಿ ಕ್ಯಾಸಿನೊ’ ಎಂಬ ವೆಬ್​ಸಿರೀಸ್​ನಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಹಿಂದಿ ಚಿತ್ರದಲ್ಲಿ ಐಂದ್ರಿತಾ ಸದ್ದಿಲ್ಲದೆ ನಟಿಸಿದ್ದಾರೆ. ಹೆಸರು ‘ರಾವಣ್ ಲೀಲಾ’. ಅ.1ರಂದು ಈ ಚಿತ್ರವು ನೇರವಾಗಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಲಿದೆ.

    ‘ಸ್ಕ್ಯಾಮ್ 1992’ ವೆಬ್ ಸರಣಿ ಮೂಲಕವೇ ಮನೆ ಮಾತಾಗಿರುವ ಪ್ರತೀಕ್ ಗಾಂಧಿ, ‘ರಾವಣ್ ಲೀಲಾ’ ಮೂಲಕ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಈ ಮೊದಲು ‘ಲವ್​ಯಾತ್ರಿ’, ‘ಮಿತ್ರೋಂ’ ಸೇರಿ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಪ್ರತೀಕ್ ನಟಿಸಿದ್ದರು. ಇದೀಗ, ‘ರಾವಣ್ ಲೀಲಾ’ದಲ್ಲಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಅವರಿಗಿಲ್ಲಿ ಐಂದ್ರಿತಾ ರೇ ಜೋಡಿಯಾಗಿದ್ದಾರೆ.

    ಹಾರ್ದಿಕ್ ಗಜ್ಜರ್ ನಿರ್ದೇಶನದ ಈ ಸಿನಿಮಾ ಶೀರ್ಷಿಕೆಯೇ ಹೇಳುವಂತೆ ಲವ್​ಸ್ಟೋರಿ ಕಥಾಹಂದರವಾದರೂ, ಬಿಡುಗಡೆ ಆಗಿರುವ ಫಸ್ಟ್ ಲುಕ್​ನಲ್ಲಿ ರಾವಣನ ಅವತಾರದಲ್ಲಿಯೂ ಪ್ರತೀಕ್ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.

    ಇನ್ನು, ಕನ್ನಡದ ವಿಷಯಕ್ಕೆ ಬಂದರೆ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಗರುಡ’ ಮತ್ತು ‘ಪ್ರೇಮಂ ಪೂಜ್ಯಂ’ ಚಿತ್ರಗಳಲ್ಲಿ ನಟಿಸಿರುವ ಐಂದ್ರಿತಾ, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts