More

    Video: ಈ ವಿಡಿಯೋ ನಿಮ್ಮ ಮನಕಲಕುತ್ತೆ; ವಿಶೇಷ ಸ್ನೇಹಿತನ ಪ್ರತಿಭೆಗೆ ಅದಿತಿ ಫಿದಾ!

    ಬೆಂಗಳೂರು: ನಟಿ ಅದಿತಿ ಪ್ರಭುದೇವ ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಶ್ರೀನಿ ನಾಯಕತ್ವದ ಮತ್ತು ನಿರ್ದೇಶನದ ಓಲ್ಡ್​ ಮಾಂಕ್​ ಚಿತ್ರದ ಚಿತ್ರೀಕರಣದಲ್ಲಿ ಅದಿತಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿಯೇ ಅವರಿಗೆ ವಿಶೇಷ ಅತಿಥಿಯೊಬ್ಬರು ಸಿಕ್ಕಿದ್ದಾರೆ. ಅವರ ಹಾಡುಗಾರಿಕೆ ಕಂಡು ಅದಿತಿ ಫಿದಾ ಆಗಿದ್ದಾರೆ.

    ಇದನ್ನೂ ಓದಿ45 ದಿನಗಳು ಗತಿಸಿದವು; ಎಸ್​ಪಿ ಬಾಲಸುಬ್ರಮಣ್ಯಂ ಆರೋಗ್ಯ ಈಗ ಹೇಗಿದೆ?

    ನಗುವ ನಯನ ಮಧುರ ಮೌನ.. ಹಾಡನ್ನು ಹಾಡಿದ ಪರಿ ಕಂಡು ಅಚ್ಚರಿಗೊಳಗಾದ ಅದಿತಿ, ಅಂಧ ಗಾಯಕನ ಜತೆಗೆ ತಾವೈ ದನಿ ಗೂಡಿಸಿದ್ದಾರೆ. ಆತನ ಗಾಯನವನ್ನು ಆನಂದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ ಗಾಯಕನ ಕುರಿತು ಒಂದಷ್ಟು ಸಾಲೂಗಳನ್ನೂ ಬರೆದುಕೊಂಡಿದ್ದಾರೆ.

    ವಿಶೇಷ ಸ್ನೇಹಿತನ ಪ್ರತಿಭೆ ಕಂಡು ಬೆರಗಾದ ನಟಿ ಅದಿತಿ ಪ್ರಭುದೇವ

    ಓಲ್ಡ್ ಮಾಂಕ್​ ಚಿತ್ರದ ಶೂಟಿಂಗ್​ ವೇಳೆ ವಿಶೇಷ ಗಾಯಕನ ಪ್ರತಿಭೆಗೆ ಅದಿತಿ ಫಿದಾ..

    Posted by Vijayavani on Sunday, September 20, 2020

    ‘ಪ್ರತಿಭೆ ಯಾರ ಆಸ್ತಿಯೂ ಅಲ್ಲ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಧೃತಿಗೆಡುವ ಅದೆಷ್ಟೊ ಮನಸುಗಳ ಮಧ್ಯೆ ದೇವರು ಕೊಟ್ಟ ಈ ಜನ್ಮವನ್ನು ಸಂತೋಷದಿಂದ ಕಳೆಯುತ್ತಿರುವ ಇಂತಹವರು ಸ್ಪೂರ್ತಿ ಎನಿಸುತ್ತಾರೆ. Infact, he made my day . ಓಲ್ಡ್ ಮಾಂಕ್ ಚಿತ್ರೀಕರಣದ ವೇಳೆ ಸಿಕ್ಕ ಗೆಳೆಯನಿಗೆ ಮನದುಂಬಿದ ಹಾರೈಕೆಗಳು ನಿನ್ನ ನಗು ಎಂದೂ ಮಾಸದಿರಲಿ’ ಎಂದು ಬರೆದುಕೊಂಡಿದ್ದಾರೆ.

    Photos; ಕಣ್ಣಲ್ಲೇ ಕೊಲ್ಲೋ ನಭಾ ನಟೇಶ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts