More

    ಪೊಲೀಸ್​ ಠಾಣೆಯಲ್ಲಿ ಅಸಭ್ಯ ವರ್ತನೆ: ಜೈಲರ್​ ವಿಲ್ಲನ್ ವಿನಾಯಕನ್​​ ಬಂಧನ

    ಕೊಚ್ಚಿ: ಮದ್ಯಪಾನ ಮಾಡಿ ಸಾರ್ವಜನಿಕ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ನಟ ವಿನಾಯಕನ್​ರನ್ನು ಕೇರಳದ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ಠಾಣೆಯ ಕಾರ್ಯಾಚರಣೆಗೂ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾಲಿವುಡ್​ನಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಆದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾದಲ್ಲಿ ವಿನಾಯಕನ್​ ಅವರು ಮುಖ್ಯ ಖಳನಾಯಕನಾಗಿ ನಟಿಸಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ವಿನಾಯಕನ್,​ ಜೈಲರ್​ ಸಿನಿಮಾದಲ್ಲಿ ಅಬ್ಬರಿಸಿ ಬೊಬ್ಬಿರಿದ್ದಾರೆ.

    ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ವಿನಾಯಕನ್​ ಇದೀಗ ಮದ್ಯದ ಅಮಲಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ತಾವು ತಂಗಿರುವ ಅಪಾರ್ಟ್​ಮೆಂಟ್​ನಲ್ಲಿ ವಿನಾಯಕನ್​ ಗಲಾಟೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್​ ಠಾಣೆಗೆ ಕರೆಯಿಸಲಾಯಿತು. ಆದರೆ, ಠಾಣೆಯಲ್ಲೂ ಕುಡಿದ ಅಮಲಿನಲ್ಲಿ ವಿನಾಯಕನ್​ ರಂಪಾಟ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

    ವಿನಾಯಕನ್​ ಬಂಧನದ ಬಳಿಕ ಅವರನ್ನು ಆಲ್ಕೋಹಾಲ್​ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರ ವಿರುದ್ಧ ದೂರು ದಾಖಲಿಸಿ, ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.

    ಈ ಹಿಂದೆ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ನಂತರ ವಿನಾಯಕನ್, ಚಾಂಡಿ ಅವರಿಗೆ ಅವಮಾನ ಮಾಡಿದ್ದರು. ಫೇಸ್ ಬುಕ್ ಲೈವ್ ವೀಡಿಯೋದಲ್ಲಿ ವಿನಾಯಕನ್, ಯಾರು ಈ ಉಮ್ಮನ್ ಚಾಂಡಿ, ಅವರು ಸತ್ತಿದ್ದಕ್ಕೆ ಮೂರು ದಿನ ರಜೆ ಯಾಕೆ? ಎಂದು ಪ್ರಶ್ನಿಸಿದ್ದರು. ಬಳಿಕ ನಟನ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು ಮತ್ತು ಪ್ರಕರಣ ಸಹ ದಾಖಲಾಗಿತ್ತು.

    ಅಂದಹಾಗೆ ವಿನಾಯಕನ್​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್​ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದೀಗ ಜೈಲರ್​ ಸಿನಿಮಾದಲ್ಲಿ ನಟಿಸುವ ಎಲ್ಲ ಚಿತ್ರರಂಗದ ಗಮನ ಸೆಳೆದಿದ್ದಾರೆ. ಜೈಲರ್​ ಸಿನಿಮಾ ಬಿಡುಗಡೆಯಾಗುವವರೆಗೂ ಕಾವಲಯ್ಯ ಹಾಡಿನಿಂದಾಗಿ ತಮನ್ನಾ ಎಲ್ಲೆಡೆ ಸುದ್ದಿಯಾಗಿದ್ದರು. ಆದರೆ, ಸಿನಿಮಾ ಬಿಡುಗಡೆ ಬಳಿಕ ಇದೀಗ ವಿನಾಯಕನ್​ ಅವರ ವಿಲ್ಲನ್​ ಪಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.

    10 ಮಹಿಳೆಯರ ಜತೆ ಮಲಗಿದ್ದೇನೆ
    ವಿನಾಯಕನ್​ ಅವರ ಎಡವಟ್ಟುಗಳು ಒಂದೆರೆಡಲ್ಲ. ಕಳೆದ ವರ್ಷ (2022) ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿದ ವಿ.ಕೆ. ಪ್ರಕಾಶ್​ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್​ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಬಗ್ಗೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದಿದ್ದರು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕ್ಷಮೆಯಾಚಿಸಿದ ವಿನಾಯಕನ್, ತಾನು ಯಾವುದೇ ಮಹಿಳೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸಿಲ್ಲ ಎಂದು ಹೇಳಿದರು. (ಏಜೆನ್ಸೀಸ್​)

    ಈವರೆಗೂ 10 ಮಹಿಳೆಯರ ಜತೆ ಮಲಗಿದ್ದೇನೆ! ಮತ್ತೆ ವೈರಲ್​ ಆಯ್ತು ಜೈಲರ್​ ವಿಲ್ಲನ್ ವಿವಾದಾತ್ಮಕ ಮಾತುಗಳು​ ​

    ಜೈಲರ್ ಚಿತ್ರಕ್ಕಾಗಿ ವಿನಾಯಕನ್​ಗೆ ಸಿಕ್ಕ ಸಂಭಾವನೆ ಎಷ್ಟು? ಇಷ್ಟು ಕಡಿಮೆ ಹಣ ಪಡೆದ್ರಾ ವರ್ಮನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts