More

    ‘ಕೈ’ ಬಿಟ್ಟಿದ್ದ ಬಾಲಿವುಡ್ ನಟಿ ಊರ್ಮಿಳಾ, ಶಿವ ಸೇನೆಗೆ ಸೇರ್ಪಡೆ

    ಮುಂಬೈ: ಬಾಲಿವುಡ್​ ನಟಿ ಊರ್ಮಿಳಾ ಮತೋಂದ್ಕರ್​ ಶಿವಸೇನೆಗೆ ಸೇರುವ ಮೂಲಕ ಮತ್ತೆ ರಾಜಕೀಯಕ್ಕೆ ಆಗಮಿಸಿದ್ದಾರೆ. ಕಳೆದ ವರ್ಷವಷ್ಟೇ ಕಾಂಗ್ರೆಸ್​ನಿಂದ ಹೊರಬಂದಿದ್ದ ಊರ್ಮಿಳಾ ಇದೀಗ ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆಗೆ ಸೇರ್ಪಡೆಗೊಂಡಿದ್ದು, ಉದ್ಧವ್ ಠಾಕ್ರೆ ಬರಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಚಿತ್ರಮಂದಿರ ಮತ್ತೆ ಖಾಲಿಖಾಲಿ! ಈ ವಾರ ಕೇವಲ ಒಂದೇ ಸಿನಿಮಾ ಬಿಡುಗಡೆ

    2019ರ ಮಾರ್ಚ್​ನಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ ಪಾರ್ಟಿಗೆ ಸೇರ್ಪಡೆಗೊಂಡಿದ್ದ ಊರ್ಮಿಳಾ, ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಹೀನಾಯ ಸೋಲನ್ನೂ ಕಂಡಿದ್ದರು. ಬಳಿಕ ಸೆಪ್ಟೆಂಬರ್ 10ರಂದು ಕಾಂಗ್ರೆಸ್​ಗೆ ವಿದಾಯ ಹೇಳಿದ್ದರು. ಇದೀಗ ಒಂದು ವರ್ಷಷ ಬಳಿಕ ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, 2018ರಲ್ಲಿ ತೆರೆಗೆ ಬಂದ ಬ್ಲಾಕ್​ಮೇಲ್​ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ನಿಭಾಯಿಸಿದ್ದರು. ಅದೇ ಅವರ ಕೊನೇ ಸಿನಿಮಾ. ಅದಾದ ಬಳಿಕ ರಾಜಕೀಯದಲ್ಲಿಯೇ ಹೆಚ್ಚು ಸಕ್ರಿಯರಾದರು.

    ಜನವರಿಯಿಂದ ಮದಕರಿ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts