More

    ಅಪ್ಪನ ಹಾದಿಯಲ್ಲಿ ಮಗ; ನೇತ್ರದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಶಿವಣ್ಣ ಸಹಿ..

    ಬೆಂಗಳೂರು: ‘ನೇತ್ರದಾನ ಮಹಾದಾನ’ ಎಂಬ ಮಾತಿಗೆ ಬದ್ಧವಾಗಿ ನಡೆದುಕೊಂಡಿದ್ದರು ವರನಟ ಡಾ. ರಾಜಕುಮಾರ್. ಹೇಳಿದಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಅದೇ ಹಾದಿಯಲ್ಲಿ ಡಾ. ರಾಜ್ ಅವರ ಹಿರಿಮಗ ಶಿವರಾಜ್​ಕುಮಾರ್ ಸಹ ತಮ್ಮ ಕಣ್ಣುಗಳನ್ನು ದಾನ ಮಾಡುವುದಕ್ಕೆ ಮುಂದಾಗಿದ್ದಾರೆ.

    ಇತ್ತೀಚೆಗಷ್ಟೇ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಕನ್ನಡದ ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಆ ಸಂಭ್ರಮವನ್ನು ಹಂಚಿಕೊಳ್ಳಲು ಮಂಗಳವಾರ ನಗರದ ನಾರಾಯಣ ನೇತ್ರಾಲಯದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಬಗ್ಗೆ ಶಿವರಾಜಕುಮಾರ್ ಘೋಷಣೆ ಮಾಡಿದರು. ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ, ಇತರರಿಗೂ ನೇತ್ರದಾನ ಮಾಡುವಂತೆ ಮನವಿ ಮಾಡಿದರು.

    ಇನ್ನು ‘ಕವಚ’ ಸಿನಿಮಾದಲ್ಲಿ ಅಂಧನಾಗಿ ಶಿವಣ್ಣ ನಟಿಸಿದ್ದರು. ಆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ದೇಹದಾನ ಮಾಡುವ ಬಗ್ಗೆಯೂ ಶಿವರಾಜ್​ಕುಮಾರ್ ಹೇಳಿದ್ದರು. ಇದೀಗ ಕಣ್ಣುಗಳನ್ನೂ ದಾನ ಮಾಡುವುದಾಗಿ ಘೋಷಿಸಿದ್ದಾರೆ. 1994ರಲ್ಲಿ ಡಾ. ರಾಜ್ ನೇತ್ರ ಬ್ಯಾಂಕ್ ತೆರೆದಿದ್ದರು. 2006ರಲ್ಲಿ ಅವರ ಮರಣಾನಂತರ ಕಣ್ಣುಗಳನ್ನು ಅದೇ ಬ್ಯಾಂಕ್​ಗೆ ದಾನ ಮಾಡಲಾಗಿತ್ತು.

    ಏರ್​ಪೋರ್ಟ್​ನಲ್ಲಿ ಕ್ಯಾಬ್​ ಚಾಲಕನಿಂದ ಆತ್ಮಹತ್ಯೆ ಯತ್ನ; ಕಾರಣದ ಸುಳಿವು ನೀಡಿತು ಚಾಲಕರ ಈ ಆಕ್ರೋಶ?

    ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts