More

    ಸಾಧನೆ ಮೂಲಕ ಗುರುಗಳಿಗೆ ಗೌರವ ನೀಡಿ: ನಟ ಪ್ರಥಮ್ ಸಲಹೆ

    ಶಿವಮೊಗ್ಗ: ಏಳು-ಬೀಳುಗಳ ನಡುವೆ ಜೀವನದಲ್ಲಿ ಸಾಧನೆ ಎಂಬ ಶಿಖರವನ್ನೇರುವುದೇ ಗುರುಗಳಿಗೆ ನಾವು ನೀಡುವ ಅತ್ಯುನ್ನತ ಗೌರವ ಎಂದು ನಟ ಪ್ರಥಮ್ ಹೇಳಿದರು.
    ನಗರದ ಜೆಎನ್‌ಎನ್‌ಇ ಕಾಲೇಜಿನ ಎಂಬಿಎ ವಿಭಾಗದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉತ್ಥಾನ-2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳು ಮುಂದೊಂದು ದಿನ ನಮ್ಮನ್ನು ಕಂಡು ಹೆಮ್ಮೆ ಪಡುವಂತಹ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
    ಶಿಕ್ಷಕರ ದಿನ ಎನ್ನುವುದು ಆಚರಣೆಗೆ ಸೀಮಿತವಾಗಬಾರದು. ಜಗತ್ತಿನಲ್ಲಿ ಗುರುವಿಗೆ ಇರುವ ಸ್ಥಾನ, ಗೌರವವನ್ನು ಮತ್ತೊಬ್ಬರು ಪಡೆಯಲು ಸಾಧ್ಯವೇ ಇಲ್ಲ. ಪ್ರತಿ ವಿದ್ಯಾರ್ಥಿಯ ಬದುಕಿಗೆ ದಾರಿದೀಪ ಆಗುವವರೇ ನಿಜವಾದ ಗುರುಗಳು ಎಂದರು.
    ವಿವಿಧ ಕಾಲೇಜುಗಳ 140ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಮತ್ತೆ ಹಾಡಿತು ಕೋಗಿಲೆ, ಅವನೇ ಶ್ರೀಮನ್ನಾರಾಯಣ, ಕಿಂದರ ಜೋಗಿ, ಕಲಾವಿದ, ಡ್ಯಾನ್ಸ್ ರಾಜಾ ಡ್ಯಾನ್ಸ್, ಸಾಂಗ್ಲಿಯಾನ, ಉಳಿದವರು ಕಂಡಂತೆ, ಮಾಯಾಬಜಾರ್ ಸ್ಪರ್ಧೆ ಆಯೋಜಿಸಲಾಗಿತ್ತು.
    ಎನ್‌ಇಎಸ್ ಅಧ್ಯಕ್ಷ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷ ಟಿ.ಆರ್. ಅಶ್ವತನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಖಜಾಂಚಿ ಸಿ.ಆರ್.ನಾಗರಾಜ, ಕುಲಸಚಿವ ಪ್ರೊ. ಹೂವಯ್ಯಗೌಡ, ಕಾಲೇಜಿನ ಪ್ರಾಚಾರ್ಯ ಡಾ.ಪಿ.ಮಂಜುನಾಥ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಸಿ.ಶ್ರೀಕಾಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts