More

    ಫ್ರೀ ಊಟ, ಫ್ರೀ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..

    ಬೆಂಗಳೂರು: ಮನೆಗೆ ಕರೆದು ಉಚಿತವಾಗಿ ಊಟ ಹಾಕಿಸಿದ್ದಲ್ಲದೆ, ಸಿನಿಮಾ ನೋಡಲಿಕ್ಕೆ ಟಿಕೆಟ್ ಕೂಡ ಉಚಿತ. ಹೀಗೊಂದು ಆಫರ್ ಫುಡ್ ಡೆಲಿವರಿ ಬಾಯ್ಸ್​ಗೆ ಸಿಕ್ಕಿದ್ದು, ಅವರ ಸಂಭ್ರಮಕ್ಕೆ ಎಣೆ ಎಲ್ಲದಂತಾಗಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಪೆಟ್ರೊಮ್ಯಾಕ್ಸ್.

    ಹೌದು.. ಪೆಟ್ರೊಮ್ಯಾಕ್ಸ್ ಸಿನಿಮಾದ ಪ್ರಚಾರಾರ್ಥವಾಗಿ ನಡೆದ ಕಾರ್ಯಕ್ರಮದಿಂದಾಗಿ ಡೆಲಿವರಿ ಬಾಯ್ಸ್​ಗೆ ಹೀಗೊಂದು ಚಾನ್ಸ್ ಸಿಕ್ಕಿದೆ. ಏಕೆಂದರೆ ಮೊನ್ನೆಮೊನ್ನೆಯಷ್ಟೇ ಡೆಲಿವರಿ ಬಾಯ್​ ಆಗಿ ಬೀದಿಗಳಿದು ಮನೆಮನೆಗೂ ತೆರಳಿದ್ದ ನಾಯಕ ನಟ ನೀನಾಸಂ ಸತೀಶ್, ಈಗ ಡೆಲಿವರಿ ಬಾಯ್ಸ್​ನ ಮನೆಗೇ ಕರೆಸಿ ಊಟ ಕೂಡ ಹಾಕಿಸಿದ್ದಾರೆ.

    ಸಿನಿಮಾದಲ್ಲಿ ತಾವು ಅನಾಥ ಯುವಕನಾಗಿ ಕಾಣಿಸಿಕೊಂಡಿದ್ದ ಅವರು ಇತ್ತೀಚೆಗೆ ಅನಾಥಾಶ್ರಮದವರ ಜತೆ ಸಹಭೋಜನ ಮಾಡಿದ್ದು, ಈ ಚಿತ್ರದಲ್ಲಿ ಡೆಲಿವರಿ ಬಾಯ್​ ಆಗಿಯೂ ಕಾಣಿಸಿಕೊಂಡಿದ್ದರಿಂದ ಫುಡ್ ಡೆಲಿವರಿ ಬಾಯ್ ಆಗಿ ಅಭಿನಯಿಸಿದ್ದರಿಂದ ಒಂದಷ್ಟು ಡೆಲಿವರಿ ಹುಡುಗರನ್ನು ಮನೆಗೆ ಕರೆಸಿ ಜತೆಗೇ ಊಟ ಮಾಡಿದ್ದಾರೆ. ಈ ಮೂಲಕ ರೀಲ್​ನಲ್ಲಿ ನಡೆದಿದ್ದನ್ನೆಲ್ಲ ರಿಯಲ್ ಆಗಿ ಮಾಡಿದ್ದಾರೆ ನಟ ಸತೀಶ್.

    ಇದನ್ನೂ ಓದಿ: ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

    ಫುಡ್ ಡೆಲಿವರಿ ಮಾಡುವಾಗ ಎಂಥ ಸಂದರ್ಭಗಳು ಎದುರಾಗಿದ್ದವು, ಅದನ್ನು ಹೇಗೆ ಎದುರಿಸಿದ್ವಿ ಎಂಬುದನ್ನು ಹೇಳುತ್ತ ಡೆಲಿವರಿ ಬಾಯ್ಸ್ ಈ ಸಂದರ್ಭದಲ್ಲಿ ತಮ್ಮ ಸಂಕಷ್ಟಗಳ ಸರಮಾಲೆಯನ್ನು ಬಿಚ್ಚಿಟ್ಟಿದ್ದಾರೆ. ಊಟ ಕೊಡಿಸಿದ ಬಳಿಕ ನಿಮಗೆಲ್ಲರಿಗೂ ಮಾಲ್​ನಲ್ಲಿ ಸಿನಿಮಾ ನೋಡಲು ಉಚಿತವಾಗಿ ಟಿಕೆಟ್ ಕೊಡುವುದಾಗಿ ಹೇಳಿದ ನಟ ಸತೀಶ್, ನೀವೆಷ್ಟು ಜನರಿದ್ದೀರಿ ಹೇಳಿ, ಎಲ್ಲರಿಗೂ ಉಚಿತವಾಗಿ ಟಿಕೆಟ್ ಕೊಡುತ್ತೇವೆ ಎಂದು ಆಫರ್ ನೀಡಿದ್ದಾರೆ.

    ‘ನೀರ್ ದೋಸೆ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯಪ್ರಸಾದ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಜತೆಗೆ ಹರಿಪ್ರಿಯಾ, ಕಾರುಣ್ಯ ರಾಮ್ ಅಭಿನಯಿಸಿದ್ದಾರೆ. ನಾಲ್ವರ ಬದುಕಿನಲ್ಲಿ ಭರವಸೆಯ ಬೆಳಕು ಹೇಗೆ ಮೂಡುತ್ತದೆ ಎಂಬುದು ಚಿತ್ರದ ಕಥೆಯಾಗಿದ್ದು, ಅದನ್ನು ನಿರ್ದೇಶಕ ಪೆಟ್ರೊಮ್ಯಾಕ್ಸ್ ಉಪಮೆಯೊಂದಿಗೆ ಹೇಳಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್​ ಮತ್ತು ಸ್ಟುಡಿಯೊ 10 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ ಶುಕ್ರವಾರ (ಜುಲೈ 15) ಬಿಡುಗಡೆ ಆಗಲಿದೆ.

    ಕಿಚ್ಚ ಸುದೀಪ್​ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..

    ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts