More

    ಬಾಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿಸಲು ಕ್ರಮ

    ಬಾಳೆಹೊನ್ನೂರು: ಜಿಲ್ಲೆಯಲ್ಲಿಯೇ ಬಿ.ಕಣಬೂರು ಅತಿ ದೊಡ್ಡ ಗ್ರಾಪಂ. ಬಾಳೆಹೊನ್ನೂರನ್ನು ಪಟ್ಟಣ ಪಂಚಾಯಿತಿಯಾಗಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಪಟ್ಟಣದ ಬಿ.ಕಣಬೂರು ಗ್ರಾಪಂನಲ್ಲಿ ಮಂಗಳವಾರ ನೂತನ ಗ್ರಾಪಂ ಸಭಾಂಗಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು,ಬಿ.ಕಣಬೂರು ಗ್ರಾಪಂ ಕಟ್ಟಡ, ಸಭಾಂಗಣ ಹಳೆಯದಾಗಿವೆ. ನೂತನ ಕಟ್ಟಡ ನಿರ್ಮಾಣ ಅಗತ್ಯ. ಇದಕ್ಕೂ ಮೊದಲು ಜಾಗದ ಸರ್ವೇ ಮಾಡಿಸಿ ಸೂಕ್ತ ಅಳತೆಯಲ್ಲಿ ಪಪಂಗೆ ಬೇಕಾಗುವ ಮಾದರಿಯಲ್ಲೇ ನೂತನ ಕಟ್ಟಡ ನಿರ್ಮಿಸಬೇಕು ಎಂದರು.
    ನೂತನ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಿರುವಷ್ಟು ಅನುದಾನವನ್ನು ನಾನು ನೀಡುತ್ತೇನೆ. ಕಟ್ಟಡವನ್ನು ಪೂರ್ಣಗೊಳಿಸಲು ಗ್ರಾಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಂದ ಸಮರ್ಪಕವಾಗಿ ಕಂದಾಯ ವಸೂಲಿ ಮಾಡಬೇಕು. ಬಾಕಿ ಇರುವ ಕಂದಾಯ ಶೀಘ್ರ ಪಾವತಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ ವಸೂಲಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ನಾನು ಶಾಸಕನಾದ ನಂತರ ಬಾಳೆಹೊನ್ನೂರು ಪಟ್ಟಣದ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡಿವೈಡರ್ ನಿರ್ಮಿಸಿ ಬೀದಿ ದೀಪವನ್ನು ಅಳವಡಿಸಲಾಗುವುದು. ಇದಕ್ಕೆ ಅನುದಾನ ಮೀಸಲಿಡಲಾಗಿದೆ. ಪಟ್ಟಣದ ಒಳ ರಸ್ತೆಗಳ ಕಾಂಕ್ರಿಟೀಕರಣಕ್ಕೆ ಆದ್ಯತೆ ನೀಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಆರೋಗ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
    ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಮಾತನಾಡಿ, ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ಸಭಾಂಗಣ ನಿರ್ಮಿಸುವ ಯೋಜನೆ ಹೊಂದಲಾಗಿದೆ. ಗ್ರಾಪಂನ ನರೇಗಾಯೋಜನೆಯಡಿ 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಶಾಸಕರು 5 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇನ್ನುಳಿದಂತೆ ಬೇರೆ ಯೋಜನೆಗಳಿಂದ ಹಣವನ್ನು ಸಂಗ್ರಹಿಸಲಾಗುವುದು. ಗ್ರಾಪಂ ಭರವಸೆ ನೀಡಿದಂತೆ ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ ಎಂದರು.
    ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಸುಪ್ರೀತ್, ಪ್ರಮುಖರಾದ ಹೇಮಲತಾ, ಎಂ.ಎಸ್.ಚನ್ನಕೇಶವ್, ಚಂದ್ರಮ್ಮ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಎಂ.ಜೆ.ಮಹೇಶ್ ಆಚಾರ್ಯ, ಕೋಕಿಲಮ್ಮ, ಪ್ರಭಾಕರ್ ಪ್ರಣಸ್ವಿ, ಮಧುಸೂದನ್, ಜಾನ್ ಡಿಸೋಜ, ರವಿಚಂದ್ರ, ಸಂತೋಷ್‌ಕುಮಾರ್, ಶಶಿಕಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts