More

    ಕರೊನಾ ನಿಯಮ ಉಲ್ಲಂಘಿಸಿದರೆ ಕ್ರಮ

    ಧಾರವಾಡ: ಕೋವಿಡ್ ಸೋಂಕಿನ ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಶನಿವಾರದಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಏ. 20ರವರೆಗೆ ಚಾಲ್ತಿಯಲ್ಲಿರುತ್ತವೆ. ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದ ಹೊಸ ಮಾರ್ಗಸೂಚಿಗಳ ಅನುಷ್ಠಾನ ಕುರಿತು ಜಿಲ್ಲಾ ಆರೋಗ್ಯ ಪಡೆ ಹಾಗೂ ವಿವಿಧ ನೋಡಲ್ ಅಧಿಕಾರಿಗಳ ತಂಡಗಳ ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಿಯಮ ಪಾಲನೆಗಾಗಿ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ ನಡೆಯಲಿದೆ. ಉಲ್ಲಂಘಿಸುವ ವ್ಯಕ್ತಿ, ಸಂಸ್ಥೆ ಹಾಗೂ ಅಂಗಡಿ, ಸ್ಟೋರ್​ಗಳ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡ ವಿಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

    ಭಾನುವಾರದಿಂದ ಪಾಲಿಕೆ, ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಿ ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಪಾಲಿಸದವರ ವಿರುದ್ಧ ಕ್ರಮ ಜರುಗಿಸಿ ದಂಡ ಹಾಕುವ ಹಾಗೂ ಕೋವಿಡ್ ಟೆಸ್ಟ್ ಮಾಡುವ ಕ್ರಮ ವಹಿಸಲಿದ್ದಾರೆ ಎಂದರು.

    ಜಿಲ್ಲೆಯಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಹಾಸಿಗೆ ವ್ಯವಸ್ಥೆ ಲಭ್ಯವಿದೆ. ಹುಬ್ಬಳ್ಳಿಯ

    ಕಿಮ್ ್ಸಲ್ಲಿ 35 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 25 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಹ್ಯಾಂಡ್​ಗ್ಲೌಸ್, ಇತರ ಆರೋಗ್ಯ ಸುರಕ್ಷತಾ ಪರಿಕರಗಳ ಲಭ್ಯತೆ ಇದೆ ಎಂದು ಮಾಹಿತಿ ನೀಡಿದರು.

    ಪೊಲೀಸ್ ಆಯುಕ್ತ ಲಾಭೂರಾಮ, ಎಸ್​ಪಿ ಪಿ. ಕೃಷ್ಣಕಾಂತ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

    ಸೋಂಕಿನ ಹರಡುವಿಕೆ ತಡೆಗಟ್ಟಲು ಸಹಕರಿಸಿ

    ಕೋವಿಡ್ 2ನೇ ಅಲೆಯ ತೀವ್ರತೆ ತಡೆಯಲು ಮತ್ತು ಸೋಂಕಿನ ಹರಡುವಿಕೆ ತಡೆಗಟ್ಟಲು ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ. ಪ್ರತಿಯೊಬ್ಬರೂ ಕರೊನಾ ಸೈನಿಕರಂತೆ ಎಚ್ಚರ ವಹಿಸಿ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಲು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೊಸ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆಯ ಉಚಿತ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಅಲ್ಲದೆ, ಪಾಲಿಕೆಯ ಸಹಾಯವಾಣಿ 0836- 2213888, 2213869 ಅಥವಾ ಕಂಟ್ರೋಲ್ ರೂಂ ಮೊ: 8277803778ಗೆ ವಿಡಿಯೋ ಸಂದೇಶ ರವಾನಿಸಬಹುದು. ಅಬಕಾರಿ ಇಲಾಖೆ ದೂರುಗಳಿದ್ದರೆ ಸಹಾಯವಾಣಿ 18004250742ಗೆ ಕರೆ ಮಾಡಬಹುದು ಎಂದರು.

    45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು: ಕರೊನಾ ನಿರೋಧಕ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯಬೇಕು. ಜಿಲ್ಲೆಗೆ 1,36,380 ಕೋವಿಶೀಲ್ಡ್ ಹಾಗೂ 11,200 ಕೋವ್ಯಾಕ್ಸಿನ್ ಲಸಿಕೆ ಬಂದಿದ್ದು, ಈವರೆಗೆ 1,21,775 ಜನರಿಗೆ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಏ. 1ರಿಂದ ಆರಂಭಿಸಲಾಗಿರುವ ಲಸಿಕಾಕರಣ, 2 ದಿನಗಳಲ್ಲಿ ಸುಮಾರು 20,000 ಜನರಿಗೆ ಲಸಿಕೆ ನೀಡಲಾಗಿದೆ. ಅಂದಾಜು 3,08,000 ಜನರಿಗೆ ಮುಂದಿನ ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ವಸತಿ ಶಾಲೆ, ಹಾಸ್ಟೆಲ್ 20ರವರೆಗೆ ಬಂದ್

    ವಿವಿಧ ಇಲಾಖೆಗಳಡಿ 6ರಿಂದ 9ನೇ ತರಗತಿವರೆಗಿನ ವಸತಿ ಶಾಲೆಗಳು ಹಾಗೂ ಹಾಸ್ಟೆಲ್​ಗಳಿಗೆ ಏ. 20ರವರೆಗೆ ರಜೆ ಘೊಷಿಸಲಾಗಿದೆ. ಪಾಲಕರಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ತಿಳಿಸಲಾಗಿದೆ. ಮಕ್ಕಳನ್ನು ಕಳುಹಿಸುವ ಮೊದಲು ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

    ನೂತನ ಮಾರ್ಗಸೂಚಿಗಳು

    ಧಾರ್ವಿುಕ ಸ್ಥಳಗಳಲ್ಲಿ ಪ್ರವಚನ, ವಿಶೇಷ ಕಾರ್ಯಕ್ರಮ ನಿಷೇಧ.

    ಸಾರ್ವಜನಿಕ ಸ್ಥಳಗಳಲ್ಲಿ ಧಾರ್ವಿುಕ ಆಚರಣೆ, ಜಾತ್ರೆ, ಮೇಳ ನಿಷಿದ್ಧ.

    ಅಪಾರ್ಟ್​ವೆುಂಟ್​ಗಳಲ್ಲಿರುವ ಜಿಮ್ ಈಜುಗೊಳ, ಕ್ಲಬ್​ಹೌಸ್, ಒಳಾಂಗಣ ಕ್ರೀಡಾಂಗಣಗಳು ಬಂದ್.

    ಯಾವುದೇ ರ್ಯಾಲಿ, ಮುಷ್ಕರ, ಧರಣಿಗೆ ಅವಕಾಶವಿಲ್ಲ.

    ಸಾರಿಗೆ ವಾಹನಗಳಲ್ಲಿ ನಿದಿರ್ಷ್ಟಪಡಿಸಿದ ಪ್ರಯಾಣಿಕರಿಗೆ ಮಾತ್ರ ಅವಕಾಶ. ಮಾಸ್ಕ್ ಧರಿಸದಿರುವವರಿಗೆ ದಂಡ. 2ನೇ ಬಾರಿ ಮರುಕಳಿಸಿದರೆ ಏ. 20ರವರೆಗೆ ವಾಹನ ಸೀಜ್.

    ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ. ತಪ್ಪಿದ್ದಲ್ಲಿ ಚಿತ್ರಮಂದಿರವನ್ನು ಏ. 20ರವರೆಗೆ ಬಂದ್.

    ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್​ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ. 50 ಮೀರುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಬಂದ್.

    ಶಾಪಿಂಗ್ ಮಾಲ್​ಗಳು, ಮಾರ್ಕೆಟ್​ಗಳು ಹಾಗೂ ಡಿಪಾರ್ಟ್​ವೆುಂಟಲ್ ಸ್ಟೋರ್​ಗಳಲ್ಲಿ ಮಾಸ್ಕ್ ಧಾರಣೆ, ಪರಸ್ಪರ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಕಡ್ಡಾಯ.

    ಪ್ರತಿ ಅಂಗಡಿ, ಹೋಟೆಲ್, ಶಾಪಿಂಗ್ ಮಾಲ್​ಗಳಲ್ಲಿ ಗ್ರಾಹಕರಿಗೆ ಎದ್ದು ಕಾಣುವಂತೆ ಮುಂಭಾಗದಲ್ಲಿಯೇ ‘ಮಾಸ್ಕ್ ಇಲ್ಲದಿದ್ದರೆ ಪ್ರವೇಶವಿಲ್ಲ’ ಎಂಬ ಫಲಕ ಅಗತ್ಯ.

    39 ಕೋವಿಡ್ ಪ್ರಕರಣ ಪತ್ತೆ

    ಧಾರವಾಡ ಜಿಲ್ಲೆಯಲ್ಲಿ ಶನಿವಾರ 39 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 39 ಜನರನ್ನು ಬಿಡುಗಡೆ ಮಾಡಲಾಗಿದ್ದು, 375 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 628 ಜನರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts