More

    ಶುದ್ಧ ಕುಡಿಯವ ನೀರು ಪೂರೈಕೆಗೆ ಕ್ರಮ

    ಚನ್ನರಾಯಪಟ್ಟಣ: ಪಟ್ಟಣದ ಜನತೆಗೆ ಶುದ್ಧ ಕುಡಿಯವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಶಾಸಕ ಸಿ.ಎಸ್. ಬಾಲಕೃಷ್ಣ ತಿಳಿಸಿದರು.

    15ನೇ ಹಣಕಾಸು ಯೋಜನೆ, ಪುರಸಭಾ ಅನುದಾನ, ಎಸ್‌ಎಫ್‌ಸಿ ಅನುದಾನದಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ರಸ್ತೆ ಅಭಿವೃದ್ಧಿ, ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಯೋಜನೆ ಹಾಗೂ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ವಾರ್ಡ್ 1 ಮತ್ತು 20ಕ್ಕೆ ನದಿಯಿಂದ ಕುಡಿಯುವ ನೀರು ಪೂರೈಸಲು ಪುರಸಭಾ ಮುಖ್ಯಾಧಿಕಾರಿ, ಉಪವಿಭಾಗಾಧಿಕಾರಿಯಿಂದ ಅನುಮೋದನೆ ಪಡೆದು ಪ್ರತ್ಯೇಕ ಲೈನ್‌ಗಳನ್ನು ನಿರ್ಮಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜ ಮಾಡಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

    ನಗರೋತ್ಥಾನ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಶೇ.30ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಒಂದು ವಾರದೊಳಗೆ ಬಿಲ್ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುಲಾಗುವುದು. ಜತೆಗೆ ಪುರಸಭಾ ಅನುದಾನವನ್ನು ಒಳ್ಳೆಯ ರೀತಿಯಲ್ಲಿ ಬಳಸಲಾಗುವುದು ಎಂದು ತಿಳಿಸಿದರು.

    ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್‌ಕುಮಾರ್, ಪರಿಸರ ಇಂಜಿನಿಯರ್ ಕಾವ್ಯಶ್ರೀ, ಸದಸ್ಯರಾದ ನವೀನ್‌ಕುಮಾರ್, ಸುಜಾತಾ, ಜಿ.ಆರ್.ಸುರೇಶ್, ಯೋಗೀಶ್, ಅನ್ನು, ರಾಜು, ಮುಖಂಡರಾದ ಜಯರಾಮ್, ಜಗಣ್ಣ, ಜಿ.ಎಂ.ಕಿರಣ್, ಬಸವರಾಜು ಕೃಷ್ಣಣ್ಣ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts