More

    ಪೊಲೀಸರು ಬಂಧಿಸಲು ಬಂದಿದ್ದನ್ನು ನೋಡಿ ತಾನೇ ಹೊಟ್ಟೆಗೆ ಚೂರಿ ಇರಿದುಕೊಂಡ!

    ಬೆಂಗಳೂರು/ಯಲಹಂಕ: ಪೊಲೀಸರು ಬಂಧಿಸಲು ಬಂದಾಗ ಆರೋಪಿಗಳು ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ಪೊಲೀಸರನ್ನು ನೋಡುತ್ತಲೇ ತಾನೇ ತನ್ನ ಹೊಟ್ಟೆಗೆ ಇರಿದುಕೊಂಡಿದ್ದಾನೆ!

    ಜಮೀನು ಮಾರಾಟ ವಿಚಾರಕ್ಕೆ ಕಡೂರಿನಲ್ಲಿ ಇಬ್ಬರಿಗೆ ಗುಂಡಿಕ್ಕಿ, ನಗರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಈತ. ಹೆಸರು ಕಾರ್ತಿಕ್ ಅಲಿಯಾಸ್ ಗಂಗಾಧರ್. ಈತ ಮತ್ತೆಲ್ಲೋ ಅಪರಾಧ ಕೃತ್ಯ ಎಸಗಿ ಇಲ್ಲಿ ಬಂದು ಅಡಗಿಕೊಂಡಿದ್ದ.

    ಕಡೂರು ಮೂಲದ ಉಪನ್ಯಾಸಕ ಸುಮಂತ್ ಕುಮಾರ್ ಮತ್ತು ಆತನ ಸ್ನೇಹಿತ ಕಲ್ಯಾಣ್ ಕುಮಾರ್ ಮೇ 27ರಂದು ಜಮೀನು ಮಾರಾಟ ವಿಚಾರಕ್ಕೆ ಕಾರ್ತಿಕ್‌ನನ್ನು ಬಾಣೂರಿನಲ್ಲಿ ಭೇಟಿಯಾಗಿದ್ದರು. ಜಮೀನು ಮಾರಾಟದ ವ್ಯವಹಾರ ಕುದುರಿಲ್ಲ. ಕಾರ್ತಿಕ್ ಜತೆಗಿದ್ದ ವ್ಯಕ್ತಿ, ‘ಹಣ ಕೊಡುವುದಾಗಿ ಕರೆಸಿಕೊಂಡು ಸತಾಯಿಸುತ್ತೀರ’ ಎಂದು ಅವಾಚ್ಯವಾಗಿ ನಿಂದಿಸಿದ್ದ. ಇದೇ ವಿಚಾರಕ್ಕೆ ಸುಮಂತ್ ಮತ್ತು ಕಾರ್ತಿಕ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು.

    ಇದನ್ನೂ ಓದಿ ಕಳ್ಳತನ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ವಿದ್ಯಾರ್ಥಿಗಳಿಗೆ ಪ್ರೊಫೆಸರ್​ ವಾರ್ನಿಂಗ್!

    ಆಕ್ರೋಶಗೊಂಡ ಕಾರ್ತಿಕ್ ತನ್ನ ಬಳಿಯಿದ್ದ ಗನ್‌ನಿಂದ ಸುಮಂತ್ ಮೇಲೆ ಗುಂಡು ಹಾರಿಸಿದ್ದ. ಅದನ್ನು ತಡೆಯಲು ಮುಂದಾದ ಕಲ್ಯಾಣ್ ಮೇಲೂ ಗುಂಡಿನ ದಾಳಿ ನಡೆಸಿದ್ದ. ಕಾರ್ತಿಕ್ ಭುಜಕ್ಕೆ ಹಾಗೂ ಪಕ್ಕೆಗೆ ಗುಂಡು ಹೊಕ್ಕಿತ್ತು. ಕಲ್ಯಾಣ್‌ನ ಎದೆಯ ಬಲಭಾಗ, ಗಲ್ಲ, ಎಡಭುಜ ಹಾಗೂ ಹೆಬ್ಬೆರಳಿಗೆ ಗುಂಡು ತಾಗಿತ್ತು. ಗಾಯಾಳುಗಳ ಮೊಬೈಲ್ ಕಿತ್ತುಕೊಂಡು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಎಂದು ಕಾರ್ತಿಕ್ ಬೆದರಿಕೆ ಹಾಕಿ ಪರಾರಿಯಾಗಿದ್ದ.

    ಆತ ಯಲಹಂಕದಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಸಖರಾಯಪಟ್ಟಣ ಪೊಲೀಸರಿಗೆ ಗೊತ್ತಾಗಿತ್ತು. ಆರೋಪಿಯ ಬಂಧನಕ್ಕೆ ನೆರವು ಕೋರಿದ ಹಿನ್ನೆಲೆಯಲ್ಲಿ ಜೂ.1ರಂದು ರಾತ್ರಿ 11 ಗಂಟೆಯಲ್ಲಿ ಮಾತೃ ಲೇಔಟ್‌ನ ಮನೆಯಲ್ಲಿದ್ದ ಆರೋಪಿ ಕಾರ್ತಿಕ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಕುಟುಂಬದವರಾದ ಗಂಗರತ್ನಮ್ಮ, ನಟರಾಜ್, ರೇವಣಸಿದ್ದಪ್ಪ ಮತ್ತು ನಾಗರಾಜು ಅಡ್ಡಿಪಡಿಸಿದ್ದಾರೆ. ಈ ವೇಳೆ ಕಾರ್ತಿಕ್ ಚೂರಿಯಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ.

    ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಗಂಗರತ್ನಮ್ಮ, ನಟರಾಜ್, ರೇವಣಸಿದ್ದಪ್ಪ ಮತ್ತು ನಾಗರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ ಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ

    VIDEO: ನಿಮ್ಮಂಥ ಚೆಲುವೆ ಮಾರ್ಕೆಟ್​ಗೆ ಬರಬಾರದು ಎಂದ ಸರ್ಕಾರಿ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts