More

    ಹತ್ರಾಸ್​ ರೇಪ್​ ಕೇಸ್​ಗೆ ಬಿಗ್​ ಟ್ವಿಸ್ಟ್​ ಕೊಟ್ಟ ಹಾಲು ಶೀತಲೀಕರಣ ಕೇಂದ್ರದ ಮಾಲೀಕನ ಹೇಳಿಕೆ

    ಲಖನೌ: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ ದೇಶಾದ್ಯಂತ ಕಿಡಿ ಹೊತ್ತಿಸಿದೆ. 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ವರ್ಗದ ನಾಲ್ವರು ಯುವಕರು ಅತ್ಯಾಚಾರ ಮಾಡಿ, ನಾಲಿಗೆಯನ್ನು ಕತ್ತರಿಸಿದ್ದರು. ನಂತರ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

    ಆದರೆ ಈ ಪ್ರಕರಣಕ್ಕೆ ಈಗೊಂದು ಬಿಗ್​ ಟ್ವಿಸ್ಟ್ ಸಿಕ್ಕಿದೆ. ಗ್ಯಾಂಗ್​ರೇಪ್​ ಆರೋಪಿಗಳಲ್ಲಿ ಒಬ್ಬನಾದ ರಾಮು ಎಂಬುವನು ಕೆಲಸ ಮಾಡುತ್ತಿದ್ದ ಹಾಲು ಶೀತಲೀಕರಣ ಘಟಕದ ಮಾಲೀಕ ನೀಡಿದ ಒಂದು ಹೇಳಿಕೆ ತನಿಖೆಯ ದಿಕ್ಕನ್ನೇ ಬದಲಿಸುವಂತಿದೆ.

    ಗ್ಯಾಂಗ್​ರೇಪ್​ ನಡೆದಿದ್ದು ಹತ್ರಾಸ್​​ನ ಬೂಲ್ಗರಿ ಗ್ರಾಮದಲ್ಲಿ ಸೆಪ್ಟೆಂಬರ್​ 14ರಂದು. ಆದರೆ ರಾಮು ಅಂದು ಬೂಲ್ಗರಿಯಲ್ಲಿ ಇರಲಿಲ್ಲ. ಬದಲಿಗೆ ನಮ್ಮ ಘಟಕದಲ್ಲಿಯೇ ಎರಡು ಶಿಫ್ಟ್​​ನಲ್ಲಿ ಕೆಲಸ ಮಾಡಿದ್ದಾನೆ ಎಂದು ಆತ ಕೆಲಸ ಮಾಡುತ್ತಿದ್ದ ಚಾಂದ್​ಪಾ ಏರಿಯಾದಲ್ಲಿರುವ ಹಾಲು ಶೀತಲೀಕರಣ ಸ್ಥಾವರದ ಮಾಲೀಕ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Video | ಏನೇ ಆದ್ರೂ ಹತ್ರಾಸ್​​ಗೆ ಹೋಗೇ ಹೋಗ್ತೀನಿ: ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲ್​

    ನಾನೊಬ್ಬನೇ ಅಲ್ಲ.. ಇಲ್ಲಿನ ಸುಮಾರು 25 ಕೆಲಸಗಾರರು ಸೆಪ್ಟೆಂಬರ್​ 14ರಂದು ರಾಮು ಇಲ್ಲಿಯೇ ಕೆಲಸ ಮಾಡುತ್ತಿರುವುದನ್ನು ನೋಡಿದವರು ಇದ್ದಾರೆ. ಅಂದು ಬೆಳಗ್ಗೆ 8 ಗಂಟೆಯಿಂದ 11.30ವರೆಗೆ ಕೆಲಸ ಮಾಡಿದ್ದಾನೆ. ಹಾಗೇ ಸಂಜೆ 5 ರಿಂದ 9.30ರವರೆಗೂ ಘಟಕದಲ್ಲಿಯೇ ಇದ್ದ. ಅತ್ಯಾಚಾರ ನಡೆದಿದೆ ಎಂದು ಹೇಳಲಾದ ದಿನ ಮತ್ತು ಸಮಯದಲ್ಲಿ ಅವನು ನಮ್ಮ ಹಾಲು ಕೇಂದ್ರದಲ್ಲಿಯೇ ಇದ್ದ ಎಂದು ಮಾಲೀಕರು ಪ್ರತಿಪಾದಿಸಿದ್ದಾರೆ.

    ರಾಮು ಕಳೆದ ಮೂರು ತಿಂಗಳ ಹಿಂದಷ್ಟೇ ಇಲ್ಲಿ ಕೆಲಸಕ್ಕೆ ಸೇರಿದ್ದಾನೆ. ಆತ ಕೆಲಸಕ್ಕೆ ಬಂದ ದಿನ ಮಾಡಲಾದ ನೇಮಕಾತಿ ದಾಖಲೆಗಳನ್ನೂ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಇನ್ನು ನಮ್ಮಲ್ಲಿ ಸಿಸಿಟಿವಿ ಫೂಟೇಜ್​ಗಳೂ ಇವೆ. ಆದರೆ ಆರು ದಿನಗಳ ನಂತರ ಅವು ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಸೆಟಿಂಗ್​ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಾಗೇ, ರಾಮು ಬಗ್ಗೆ ಹೀಗೆಲ್ಲ ಕೇಳಲು ಕಷ್ಟವಾಗುತ್ತದೆ. ಅವನದು ಅತ್ಯುತ್ತಮ ನಡತೆಯಾಗಿತ್ತು ಎಂದಿದ್ದಾರೆ. (ಏಜೆನ್ಸೀಸ್​)

    ಹತ್ರಾಸ್ ರೇಪ್​​ ಕೇಸ್​: ಸಿಎಂ ಯೋಗಿಗೆ ಸೂಕ್ಷ್ಮವಾಗಿ ಬುದ್ಧಿ ಹೇಳಿ, ಎಚ್ಚರಿಕೆಯನ್ನೂ ನೀಡಿದ ಉಮಾ ಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts