More

    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ, ದಾಖಲೆ ಪರಿಶೀಲನೆ ​

    ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯದ ಭ್ರಷ್ಟ ಅಧಿಕಾರಿಗಳ ಮನೆಗೆ ದಾಳಿ ಮಾಡುವ ಮೂಲಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಲಂಚಕೋರರಿಗೆ ಶಾಕ್​ ನೀಡಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರುವ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದೆ.

    ಕೋಲಾರ, ಚಿತ್ರದುರ್ಗ ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ ಮತ್ತು ಧಾರವಾಡದಲ್ಲಿ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.

    ಕೋಲಾರದ ಡಿಹೆಚ್ಓ ಡಾ. ವಿಜಯ್ ಕುಮಾರ್ ಅವರ ಕೋಲಾರ ಕಚೇರಿ, ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ, ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ಪ್ಲಾಟ್ ಸೇರಿದಂತೆ ಒಟ್ಟು ಆರು ಕಡೆ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

    ಇದನ್ನೂ ಓದಿರಿ: ಗಂಡನನ್ನು ಬಿಡಲು ಇಷ್ಟವಿಲ್ಲ ಆದ್ರೆ ಬೇರೆಯವರ ಜತೆ ಮಲಗಲು ಮನಸ್ಸು ಬಯಸುತ್ತಿದೆ ಏನು ಮಾಡಲಿ?

    ಧಾರವಾಡದ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಅವರ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮ‌ ಬಳಿಯ ತೋಟದ ಮನೆ ದಾಳಿ ಮಾಡಲಾಗಿದೆ. ಶ್ರೀನಿವಾಸ್ ಗೆ ಸೇರಿದ 2 ಮನೆ, ತೋಟದ ಮನೆ ಹಾಗೂ ಧಾರವಾಡದ ಸಾಧನಕೇರೆ ರಸ್ತೆಯಲ್ಲಿರುವ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ಕಲಬುರಗಿ ನಿವಾಸಿ ಹಾಗೂ ಬೆಂಗಳೂರಿನ ಮಾಗಡಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೂನಿಯರ್ ಇಂಜನಿಯರ್ ಆಗಿರುವ​ ಚನ್ನಬಸಪ್ಪ ಅವಟೆ ಅವರ ಕಲಬುರಗಿ ನಿವಾಸ, ಕಾಂಪ್ಲೆಕ್ಸ್ ಮತ್ತು ತೋಟದ ಮನೆ ಮೇಲೆ ದಾಳಿ ಮಾಡಲಾಗಿದೆ. ಚಿಂಚೋಳಿ ತಾಲೂಕಿನ ಮಗದಮಪುರ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಚನ್ನಬಸಪ್ಪ ಈ ಹಿಂದೆ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಜಿಲ್ಲಾ ಪಂಚಾಯತ್​ ಇಂಜಿನಿಯರಿಂಗ್ ವಿಭಾಗದ ಜೆಇ ಆಗಿದ್ದರು. ಎರಡು ತಿಂಗಳ ಹಿಂದಷ್ಟೇ ಆಳಂದದಿಂದ ಮಾಗಡಿಗೆ ವರ್ಗಾವಣೆಯಾಗಿದ್ದಾರೆ. ಎಸಿಬಿ ಎಸ್ಪಿ ಮಹೇಶ್ ಮೇಗಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜೀವ್‌ಗಾಂದಿ ನಗರದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆ, ವಿದ್ಯಾನಗರ, ಕೋಟಿಲಿಂಗೇಶ್ವರ ನಗರದ ಮನೆಗಳ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಇದನ್ನೂ ಓದಿರಿ: ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…

    ಮಂಗಳೂರಿನಲ್ಲಿ ಪಾಲಿಕೆ ಟೌನ್ ‌ಪ್ಲಾನಿಂಗ್ ಆಫೀಸರ್ ಜಯರಾಜ್ ನಿವಾಸದ ಮೇಲೆ ಎಸಿಬಿ ದಾಳಿಯಾಗಿದೆ. ಜಯರಾಜ್​ಗೆ ಸೇರಿದ ಮಂಗಳೂರು ಮನೆ ಮತ್ತು ತಂದೆ ಮನೆಗೆ ದಾಳಿ ಹಾಗೂ ಕೇರಳದಲ್ಲಿರುವ ಜಯರಾಜ್ ಪತ್ನಿಯ ಕ್ವಾಟ್ರಸ್ ಮೇಲೂ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಕೆ.ಸಿ.ಪ್ರಕಾಶ್‌ ಇನ್ಸ್‌ಪೆಕ್ಟರ್ ಗಳಾದ ಶ್ಯಾಂಸುಂದರ್‌, ಗುರುರಾಜ್‌ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಕೇರಳ ಸೇರಿ ಮಂಗಳೂರಿನಲ್ಲಿ ಅಪಾರ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ಬಳ್ಳಾರಿಯಲ್ಲಿ ಡಾ. ವಿ.ಶ್ರೀನಿವಾಸ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಾ. ಶ್ರೀನಿವಾಸ್ ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದರು. ಸದ್ಯ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಬಳ್ಳಾರಿ ನಗರದ ಹೊಸಪೇಟೆ ರಸ್ತೆ ಬಳಿ ಇರುವ ಪಿಕಾಕ್ ಬಾರ್ ಹಿಂಭಾಗದ ವಿ.ಶ್ರೀನಿವಾಸ್ ನಿವಾಸದಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬ್ಲೂಫಿಲ್ಮ್​ ವೀಕ್ಷಣೆಗೆ ವೇದಿಕೆಯಾಗ್ತಿದೆ ಸದನ- ಸಭಾಪತಿಯಿಂದ ಹೊರಟಿತೊಂದು ಆದೇಶ

    ಏರೋ ಇಂಡಿಯಾ ಶೋ: ಬೆಂಗಳೂರಿನಲ್ಲಿ ಯುಎವಿ, ಬಲೂನು, ಡ್ರೋನ್ ಹಾರಿ ಬಿಡುವಂತಿಲ್ಲ

    ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts