More

  ಅಕ್ರಮ ಆಸ್ತಿ ಬಗ್ಗೆ ಮಾಹಿತಿ ಕೊಡಿ

  ಯಾದಗಿರಿ: ಸರ್ಕಾರಿ ನೌಕರರು ಆದಾಯಕ್ಕಿಂದ ಹೆಚ್ಚಿನ ಆಸ್ತಿ ಗಳಿಗೆ ಮಾಡಿಕೊಂಡಿದ್ದಲ್ಲಿ ಈ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತರಬೇಕು ಎಂದು ಎಸಿಬಿ ಡಿಎಸ್ಪಿ ಡಾ. ಸಂತೋಷ ಕೆ.ಎಂ.ತಿಳಿಸಿದರು.

  ನಗರದ ತಹಸಿಲ್ ಕಚೇರಿ ಆವರಣದಲ್ಲಿ ಇತ್ತೀಚೆಗೆ ಕರೆದಿದ್ದ ಸಾರ್ವಜನಿಕರ ಅಹವಾಲು ಸಲ್ಲಿಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಳೆದ 2016ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿದ್ದು, ಸರ್ಕಾರಿ ಮತ್ತು ಅರೆ-ಸಕರ್ಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ಹಾಗೂ ಸಾರ್ವಜನಿಕ ನೌಕರರು ತಮ್ಮ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರು ದೂರು ನೀಡಬಹುದು ಎಂದರು.

  ಸಾರ್ವಜನಿಕರಿಂದ ಯಾವುದೇ ರೀತಿಯ ಲಂಚದ ಬೇಡಿಕೆ ಇಟ್ಟಲ್ಲಿ, ಭ್ರಷ್ಟ ಅಧಿಕಾರಿ ಅಥವಾ ಸಿಬ್ಬಂದಿ ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿದಲ್ಲಿ, ಕಿರುಕುಳ ನೀಡಿ ಲಂಚ ನೀಡುವಂತೆ ಯಾವುದೇ ಮಾರ್ಗದ ಮೂಲಕ ಒತ್ತಾಯಿಸಿದ್ದಲ್ಲಿ ಇದರ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಗೆ ಮಾಹಿತಿ, ದೂರು ನೀಡಬಹುದು ಎಂದು ಅವರು ಹೇಳಿದರು.

  ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಬಿಇಒ ಮಧುಸೂದನ ರೆಡ್ಡಿ, ತಾಲೂಕು ನೋಂದಣಾಧಿಕಾರಿ ರಾಮಚಂದ್ರರಾವ್, ಪೊಲೀಸ್ ಇನ್ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್, ಸಿಬ್ಬಂದಿ ಅಮರನಾಥ ಗಾಯಕವಾಡ, ಸಾಬಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts