More

    ವಿದ್ಯಾರ್ಥಿಗಳ ಶಿಷ್ಯವೇತನ ಕಡಿತ ಕೈಬಿಡಿ

    ರಾಯಚೂರು: ಕಟ್ಟಡ ಕಾರ್ಮಿಕರ ಕಲ್ಯಾಣ ನಿ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ಶಿಷ್ಯ ವೇತನವನ್ನು ಕಡಿತ ಮಾಡುವ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಶಿಷ್ಯ ವೇತನ ಕಡಿತದಿಂದ ಕಾರ್ಮಿಕ ಮಕ್ಕಳು ಶಿಕ್ಷಣದಿಂದ ವಂಚಿತವಾಗುವಂತಾಗಲಿದ್ದು, ಕೂಡಲೇ ಹಿಂದಿನಂತೆ ಶಿಷ್ಯ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.
    ರಾಜ್ಯ ಸರ್ಕಾರ 2022-23ನೇ ಸಾಲಿನ ಶಿಷ್ಯವೇತನವನ್ನು ನ.9ರಂದು ಬಿಡುಗಡೆಗೊಳಿಸಿದೆ. ಆದರೆ ಹಣ ಇದುವರೆಗೂ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿಲ್ಲ. ಜತೆಗೆ ಸರ್ಕಾರ ಶೇ.60 ಶಿಷ್ಯ ವೇತನವನ್ನು ಕಡಿತಗೊಳಿಸಿ ಆದೇಶ ಮಾಡಿದೆ.
    ಹಿಂದಿನ ಸರ್ಕಾರ ಶಿಷ್ಯ ವೇತನವನ್ನು ಶೇ.50ರಷ್ಟು ಶಿಷ್ಯ ವೇತನವನ್ನು ಹೆಚ್ಚಳ ಮಾಡಿತ್ತು. ಆದರೆ ಪ್ರಸಕ್ತ ಸಾಲಿನ ಶಿಷ್ಯ ವೇತನ ಇಂದಿಗೂ ಪಾವತಿಯಾಗಿಲ್ಲ. ಕೂಡಲೇ ಶಿಷ್ಯ ವೇತನವನ್ನು ಕಡಿತಗೊಳಿಸದೆ ವಿದ್ಯಾರ್ಥಿಗಳಿಗೆ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಪ್ರತಿಭಟನೆಯಲ್ಲಿ ಸಂಘಟನೆ ನಗರ ಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು ಮೋರೆ, ಸುರೇಶ ಯಾದವ್, ರಂಗನಾಥ, ಮಹೇಶ, ಮಾನಸ, ರಾಧಾ, ಶಶಿಕಲಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts