More

    ಗುಣಮಟ್ಟದ ಶಿಕ್ಷಣ ದೊರೆತರೆ ಉನ್ನತ ಸಾಧನೆ ಸಾಧ್ಯ: ಸಮಾಜ ಸೇವಕ ಕದಲೂರು ಉದಯ್ ಅಭಿಮತ

    ಮದ್ದೂರು: ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ ಎಂದು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಪಟ್ಟಣದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 7 ಹಾಗೂ 10ನೇ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಟ್ಟಣದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದ ಅಭಿನಂದಿಸಿ ಮಾತನಾಡಿದರು.
    ಹಿಂದೆ ಗುರು ಮುಂದೆ ಗುರಿ ಇದ್ದರೆ ಏನನ್ನಾದರೂ ಮಕ್ಕಳು ಸಾಧಿಸಬಹುದು. ಮಕ್ಕಳು ಇಂದಿನಿಂದಲೇ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಸಮಾಜದಲ್ಲಿ ಉನ್ನತ ಸ್ಥಾನಗಳಿಸುವ ಮೂಲಕ ಕುಟುಂಬಕ್ಕೆ ಮತ್ತು ಗುರು ಹಿರಿಯರಿಗೆ ಗೌರವ ಮತ್ತು ಕೀರ್ತಿ ತಂದು ಕೊಡಬಹುದು ಎಂದು ಕಿವಿಮಾತು ಹೇಳಿದರು.
    ತಾಲೂಕಿನ್ಯಾದಂತ 5 ಸಾವಿರ ಶಾಲಾ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೂ ಅಭಿನಂದನ ಕಾರ್ಯಕ್ರಮ ಹಮ್ಮಿಕೊಂಡು ಗೌರವಿಸಲಾಗುವುದು ಎಂದರು.
    ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆ ಸರಿಪಡಿಸಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
    ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಗೀತಾ ಜೋಗಿಗೌಡ, ಉಪ ಪ್ರಾಂಶುಪಾಲೆ ಸುಕನ್ಯ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಕೆ.ಎಂ.ರವಿ, ಪುರಸಭಾ ಸದಸ್ಯ ಕಮಲ್‌ನಾಥ್, ಮುಖಂಡರಾದ ಶಿವಪುರ ಧನಂಜಯ, ವಿಜಯ್ ವಿಕ್ರಂ, ಅವಿನಾಶ್, ನಿಡಘಟ್ಟ ಸತೀಶ್, ಗೋರವನಹಳ್ಳಿ ಮಧು, ಕದಲೂರು ತಿಮ್ಮೇಗೌಡ, ಶಿಂಷಾ ಬ್ಯಾಂಕ್ ನಿರ್ದೇಶಕ ಸತೀಶ್, ಶಿಕ್ಷಕರಾದ ಲಿಂಗರಾಜು, ಸುಶೀಲಾ, ಮೋಹನ್ ಕುಮಾರ್, ಕಿರಣ್ ಕುಮಾರ್, ಭರತ್ ರಾಜ್, ಲತಾಬಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts