More

    ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಉಚಿತವಾಗಿ ನೇತ್ರ ತಪಾಸಣಾ ಶಿಬಿರ ನಡೆಸಿದ ಆಮ್​ ಆದ್ಮಿ ಪಕ್ಷ

    ಬೆಂಗಳೂರು: ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಮ್‌ ಆದ್ಮಿ ಪಕ್ಷವು ಸಂಪಂಗಿರಾಮ ನಗರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

    ಸಂಪಂಗಿರಾಮ ನಗರ ವಾರ್ಡ್‌ನ ಎಎಪಿ ಅಧ್ಯಕ್ಷ ಪ್ರಕಾಶ್‌ ನೆಡುಂಗಡಿ ಮಾತನಾಡಿ, “ನಮ್ಮ ವಾರ್ಡ್‌ನ ಅನೇಕ ಬಡವರು ದೀರ್ಘಕಾಲದಿಂದಲೂ ಕಣ್ಣಿನ ತಪಾಸಣೆ ಮಾಡಿಸಿಕೊಂಡಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಡಾ. ರಾಜ್‌ಕುಮಾರ್‌ ಹಾಗೂ ಅವರ ಪುತ್ರ ಪುನೀತ್‌ ರಾಜ್‌ಕುಮಾರ್‌ರವರು ನೇತ್ರದಾನ ಮಾಡಿರುವುದು ನಾಡಿನೆಲ್ಲೆಡೆ ನೇತ್ರದಾನವನ್ನು ಪ್ರೋತ್ಸಾಹಿಸಿದೆ. ಆದ್ದರಿಂದ ಅವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲು ನಿರ್ಧರಿಸಿದೆವು. ದೆಹಲಿಯ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಎಎಪಿ ನಿರ್ಧರಿಸಿದ್ದು, ಇದು ಆ ಪ್ರಯತ್ನದ ಭಾಗವಾಗಿದೆ” ಎಂದು ತಿಳಿಸಿದರು.

    ಇದನ್ನೂ ಓದಿ: ಮಗನನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ತಾಯಿ; ಒಂದು ದಿನದ ಬಳಿಕ ಪುತ್ರನೂ ಶವವಾಗಿ ಪತ್ತೆ

    ಖ್ಯಾತ ನೇತ್ರತಜ್ಞ ಡಾ. ರಾಜೇಶ್‌ ಪರೇಖ್‌ ಮತ್ತು ಅವರ ತಂಡದವರು ಉತ್ತಮ ಗುಣಮಟ್ಟದ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.

    ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಉಚಿತವಾಗಿ ನೇತ್ರ ತಪಾಸಣಾ ಶಿಬಿರ ನಡೆಸಿದ ಆಮ್​ ಆದ್ಮಿ ಪಕ್ಷ

    ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಬೆಂಗಳೂರಿನ ಸರ್ವಜ್ಞ ನಗರದಲ್ಲಿ ರಾಜ್ಯೋತ್ಸವ ಆಚರಿಸಿ, ನಾಡು-ನುಡಿಯ ಉಳಿವಿಗಾಗಿ ನಾವೆಲ್ಲರೂ ಸದಾ ಬದ್ಧರಾಗಿರಬೇಕು ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

    ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts