More

    ದೆಹಲಿ ವಿಧಾನಸಭಾ ಚುನಾವಣೆ: 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಆಮ್​ ಆದ್ಮಿ ಪಾರ್ಟಿ

    ನವದೆಹಲಿ: ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧತೆಯಲ್ಲಿ ತೊಡಗಿದ್ದು ಇಂದು 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಈಗಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ನವದೆಹಲಿ ಕ್ಷೇತ್ರದಿಂದ ಹಾಗೂ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಪಟ್ಪರ್ಗಂಜ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನಿವಾಸದಲ್ಲಿ ಇಂದು ಚುನಾವಣೆಗೆ ಸಂಬಂಧಪಟ್ಟ ಸಭೆ ನಡೆದಿತ್ತು. ದೆಹಲಿಯ ಆಪ್​ ಮುಖಂಡರು ಅದರಲ್ಲಿ ಪಾಲ್ಗೊಂಡಿದ್ದರು. ಬಳಿಕ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಈ 70 ಜನರ ಪಟ್ಟಿಯಲ್ಲಿ 23 ಜನರು ಹೊಸಬರಾಗಿದ್ದಾರೆ.

    ಚಾಂದನಿಚೌಕ್​ದಿಂದ ಪರ್ಲಾದ್ ಸಿಂಗ್​, ದ್ವಾರಕಾದಲ್ಲಿ ವಿನಯ್​ ಕುಮಾರ್​ ಮಿಶ್ರಾ ಹಾಗೂ ಗಾಂಧಿ ನಗರದಿಂದ ದೀಪು ಚೌಧರಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೊಂಡ್ಲಿ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಮನೋಜ್​ ಕುಮಾರ್​ ಸ್ಪರ್ಧಿಸಿದ್ದರು. ಆದರೆ ಈ ಬಾರಿ ವಕ್ತಾರ ಕುಲ್ದೀಪ್​ ಕುಮಾರ್​ಗೆ ಟಿಕೆಟ್​ ನೀಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts