More

    ಡಿವೋರ್ಸ್ ನಂತರ ಮಾಜಿ ಹೆಂಡತಿಯೊಂದಿಗೆ ಹೆಜ್ಜೆ ಹಾಕಿದ ಆಮಿರ್ ಖಾನ್!

    ಕಾರ್ಗಿಲ್: ಬಾಲಿವುಡ್ ನಟ ಆಮಿರ್ ಖಾನ್​ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ಜತೆಗಿನ ದಾಂಪತ್ಯವನ್ನು ಅಂತ್ಯಗೊಳಿಸಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿರುವುದನ್ನು ಘೋಷಿಸಿದ್ದರು. ಅದರ ಬೆನ್ನಲ್ಲೇ ಆಮಿರ್ ಖಾನ್, ಕಿರಣ್​ರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

    ಆಮಿರ್ ಖಾನ್ ಲಾಲ್​ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಲಡಾಖ್​ನಲ್ಲಿ ನಡೆಯುತ್ತಿದೆ. ಆ ಸಿನಿಮಾಕ್ಕೆ ಅವರ ಮಾಜಿ ಪತ್ನಿ ಕಿರಣ್ ರಾವ್ ಮತ್ತು ರಾಧಿಕ ಚೌಧರಿ ಹಣ ಹೂಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಿರಣ್ ಕೂಡ ಲಡಾಖ್​ನಲ್ಲೇ ಇದ್ದಾರೆ. ಇತ್ತೀಚೆಗೆ ಸಿನಿಮಾದ ಶೂಟಿಂಗ್ ವೇಳೆ ಈ ದಂಪತಿ ಡ್ಯಾನ್ಸ್ ಮಾಡಿದ್ದಾರೆ. ಲಡಾಖ್​ನ ಸಾಂಪ್ರದಾಯಿಕ ಉಡುಗೆ ತೊಟ್ಟ ಅವರು ಹಾಕಿರುವ ಹೆಜ್ಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಆಮಿರ್ ಖಾನ್ ಕೆಂಪು ಬಣ್ಣದ ಉಡುಗೆಯ ಜತೆ ನೇರಳೆ ಬಣ್ಣದ ಟೋಪಿ ಹಾಕಿದ್ದರೆ, ಕಿರಣ್ ರಾವ್ ಕಡು ಗುಲಾಬಿ ಬಣ್ಣದ ಉಡುಗೆಯ ಜತೆ ಹಸಿರು ಬಣ್ಣದ ಟೋಪಿ ಹಾಕಿಕೊಂಡಿದ್ದಾರೆ. ಅವರೊಂದಿಗೆ ಅನೇಕರು ನೃತ್ಯ ಮಾಡುತ್ತಿದ್ದು, ಯಾವ ರೀತಿ ಹೆಜ್ಜೆ ಹಾಕಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ.

    ಲಾಲ್​ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್​ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರವನ್ನು ದೇಶದ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಟಾಲಿವುಡ್ ನಟ ನಾಗಚೈತನ್ಯ ಸೇರಿ ಅನೇಕ ಭಾಷೆಗಳ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. (ಏಜೆನ್ಸೀಸ್)

    ರಿತೇಶ್-ಜೆನಿಲಿಯಾ ಲವ್​ ಸ್ಟೋರಿಯಲ್ಲಿ ವಿಲನ್ ಎಂಟ್ರಿ! ಯಾರು ಗೊತ್ತಾ?

    ರಸ್ತೆ ಮೇಲೆ ಮೊಬೈಲ್ ನೋಡುತ್ತಾ ನಡೆಯುವವರಿಗೆ ಇನ್ನಿಲ್ಲ ಟೆನ್ಶನ್! ನಿಮಗೂ ಬರಲಿದೆ ಮೂರನೇ ಕಣ್ಣು!

    ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts