More

    ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್‌ ಹಂಚುವ ದುಸ್ಥಿತಿ ಶಾಸಕರಿಗೆ ಬರುತ್ತಿರಲಿಲ್ಲ: ಮೋಹನ್‌ ದಾಸರಿ ವಾಗ್ದಾಳಿ

    ಬೆಂಗಳೂರು: ಸರ್ ಸಿ.ವಿ.ರಾಮನ್‌ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ ಶಾಸಕ ಎಸ್.ರಘು ಅವರು ಇದೀಗ ಸೋಲಿನ ಭೀತಿಯಲ್ಲಿ ಕುಕ್ಕರ್‌ ಮೊರೆ ಹೋಗಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, ಮತದಾರರಿಗೆ ಆಮಿಷವೊಡ್ಡಲು ಶಾಸಕ ಎಸ್.ರಘು ಕಂಟೈನರ್‌ ವಾಹನಗಳಲ್ಲಿ ಕುಕ್ಕರ್‌ಗಳನ್ನು ತಂದು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿಂಬಂಧನೆಗಳ ಪ್ರಕಾರ ಇದು ಅಪರಾಧವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕುಣಿಗಲ್‌ನಲ್ಲಿ ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿ ದಾಳಿ ಮಾಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ ಸಿ.ವಿ.ರಾಮನ್‌ ಕ್ಷೇತ್ರದಲ್ಲೇಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದರು.

    ಭಾರೀ ಪ್ರಮಾಣದಲ್ಲಿ ಆಮಿಷವೊಡ್ಡಲು ಸಜ್ಜಾಗುತ್ತಿರುವ ಶಾಸಕ ರಘು ಅವರಿಗೆ ಹಣ ಎಲ್ಲಿಂದ ಬರುತ್ತಿದೆ? ಅವರಿಗೆ ಸಿಗುತ್ತಿರುವ ಸಂಬಳದಿಂದ ಇವೆಲ್ಲ ಸಾಧ್ಯವೇ? ಅಥವಾ 40% ಕಮಿಷನ್‌ ಹಣದಲ್ಲಿ ಆಮಿಷವೊಡ್ಡಿ ಚುನಾವಣೆ ಗೆದ್ದು ಮತ್ತಷ್ಟು ಕಮಿಷನ್‌ ಲೂಟಿ ಮಾಡುವ ಯೋಜನೆ ಇದೆಯಾ? ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆಯಿರುವುದನ್ನು ಗಮನಿಸಿದ ಅವರು ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಎಲ್ಲ ಕುಟಿಲ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಜನರು ಕೊಟ್ಟ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಿಕೊಂಡಿದ್ದರೆ ಅವರಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮೋಹನ್‌ ದಾಸರಿ ಟೀಕಿಸಿದರು.

    ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್‌ ಹಂಚುವ ದುಸ್ಥಿತಿ ಶಾಸಕರಿಗೆ ಬರುತ್ತಿರಲಿಲ್ಲ: ಮೋಹನ್‌ ದಾಸರಿ ವಾಗ್ದಾಳಿ

    ಕ್ಷೇತ್ರದ ಮತದಾರರಿಗೆ ಹಂಚಲು ಎಸ್.ರಘು ತಂದಿರುವ ಕುಕ್ಕರ್‌ವೊಂದನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಮಾತನಾಡಿದ ಮೋಹನ್‌ ದಾಸರಿ, ಬಿಜೆಪಿಯು ಅಧಿಕಾರಕ್ಕೆ ಬಂದಿರುವುದರ ಹಿಂದೆ ಇಂತಹ ಆಮಿಷಗಳು, ಸುಳ್ಳು ಭರವಸೆಗಳು, ಕೋಮುದ್ವೇಷದ ರಾಜಕೀಯ, ಆಪರೇಷನ್‌ ಕಮಲ ಮುಂತಾದ ಅನೇಕ ಕಳ್ಳಮಾರ್ಗಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತಿದೊಡ್ಡ ಸವಾಲಾಗಿ ಬಿಜೆಪಿ ಪರಿಣಮಿಸಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಮಿಷಗಳಿಗೆ ಮರುಳಾಗದೆ ಪ್ರಾಮಾಣಿಕ ಹಾಗೂ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನರು ಪಣತೊಡಬೇಕು ಎಂದು ಮನವಿ ಮಾಡಿದರು.

    ಹ್ಯಾರಿಸ್‌ ಪರವಾಗಿ ಕೆಎಎಸ್‌ ಅಧಿಕಾರಿಯಿಂದ ಬೆದರಿಕೆ ಕರೆ: ಆಡಿಯೋ ಬಿಡುಗಡೆ ಮಾಡಿದ ಕೆ.ಮಥಾಯಿ

    ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ಕಣ್ಣೂರು ಮಠದ ಶ್ರೀಗಳಿಗೆ ಅದ್ದೂರಿ ಸ್ವಾಗತ

    3 ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕಟ್ಟೆ! ತುರುವೇಕೆರೆಯಲ್ಲಿ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts