More

    ‘100 CRORES’ ಬೆನ್ನುಹತ್ತಿದ ‘ಆ ದಿನಗಳು’ ಚೇತನ್

    ಬೆಂಗಳೂರು: ‘ಆ ದಿನಗಳು’ ಚೇತನ್​ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದನ್ನು ಕೇಳಿದ್ದು ನೆನಪಿರಬಹುದು. ಆ ಚಿತ್ರಕ್ಕೆ ‘100 CRORES’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ. ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ಗೆ ರವಿ ಬಸ್ರೂರು'100 CRORES' ಬೆನ್ನುಹತ್ತಿದ 'ಆ ದಿನಗಳು' ಚೇತನ್

    ಈ ಚಿತ್ರದಲ್ಲಿ ಮೊದಲ ಬಾರಿಗೆ ಭ್ರಷ್ಟ ಅಧಿಕಾರಿಯ ಪಾತ್ರದಲ್ಲಿ ಚೇತನ್​ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಕುರಿತು ಮಾತನಾಡುವ ಅವರು, ‘ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್​ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಇದೊಂದು ಹೊಸ ಅನುಭವ’ ಎನ್ನುತ್ತಾರೆ ಚೇತನ್​.

    ‘100 CRORES’ ಚಿತ್ರವನ್ನು ನಿರ್ಮಿಸುತ್ತಿರುವವರು ಸಂಗೀತ ನಿರ್ದೇಶಕ ಸಾಯಿಕಾರ್ತಿಕ್​. ಕನ್ನಡದಲ್ಲಿ ಗಣೇಶ್​ ನಟಿಸುತ್ತಿರುವ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೂ ಸಂಗೀತ ಸಂಯೋಜಿಸಿರುವ ಸಾಯಿಕಾರ್ತಿಕ್​, ‘ಈಗಾಗಲೇ ತೆಲುಗಿನಲ್ಲಿ 75ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಈ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತಯಾರಾಗಿದ್ದು, ವಿರಾಟ್ ಚಕ್ರವರ್ತಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಹೇಳುವಂತೆ ನೂರು ಕೋಟಿಯ ಹಿಂದೆಯೇ ಈ ಸಿನಿಮಾ ಸಾಗಲಿದ್ದು, ಪಕ್ಕಾ ಆ್ಯಕ್ಷನ್​ ಅವತಾರದಲ್ಲಿ ಚೇತನ್​ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.

    ಚೇತನ್ ಅವರ ಆಚಾರ-ವಿಚಾರ ನೋಡಿದರೆ, ಅವರು ನಟನೆ ಜತೆಗೆ ನಿರ್ದೇಶನಕ್ಕೂ ಬರಬೇಕೆಂಬುದು ನಮ್ಮ ಬಯಕೆ ಎನ್ನುತ್ತಾರೆ ಸಿಂಪಲ್​ ಸುನಿ. ‘ಅವರ ವಿಚಾರಗಳನ್ನು ಸಿನಿಮಾದಲ್ಲಿ ಪ್ರಸ್ತುತಪಡಿಸಿದರೆ, ಅದಕ್ಕೆ ಮತ್ತಷ್ಟು ಮೈಲೇಜ್ ಸಿಗುತ್ತಿತ್ತು. 100 CRORES ಚಿತ್ರದ ಪೋಸ್ಟರ್ ಅಷ್ಟೇ ರೋಚಕವಾಗಿದೆ. ಪೋಸ್ಟರ್​ನಲ್ಲಿರುವ 100ಕೋಟಿ ಸಿನಿಮಾ ತಂಡಕ್ಕೂ ದಕ್ಕಲಿ ಎಂಬುದು ನನ್ನ ಹಾರೈಕೆ’ ಎಂದು ಚಿತ್ರತಂಡವನ್ನು ಹಾರೈಸುತ್ತಾರೆ ಸುನಿ.

    ಇದನ್ನೂ ಓದಿ: ಕೀರ್ತಿ ಮದುವೆ ಸದ್ಯಕ್ಕಿಲ್ಲ

    ಈಗಾಗಲೇ ಕರ್ನಾಟಕ ಮತ್ತು ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಚೇತನ್ ಮತ್ತು ‘ಹ್ಯಾಪಿಡೇಸ್’ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್​ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ.
    ಅಂದಹಾಗೆ, ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಸದ್ಯದಲ್ಲೇ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಿದೆ.

    ಸುಶಾಂತ್ ಸಿಂಗ್​ಗೆ ಟ್ರಿಬ್ಯೂಟ್ ; ಅಲ್ವಿದಾ ಆಲ್ಬಂ ಹಾಡಿನ ಮೂಲಕ ನೆನಪಿಸಿದ ವಿನಯ್ ಚಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts