More

    ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಅಶ್ಲೀಲ ಫೋಟೊ, ವಿಡಿಯೋ ಹರಿಬಿಟ್ಟ ಯುವಕ

    ಶಿವಮೊಗ್ಗ: ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ಫೋಟೊ ಮತ್ತು ವಿಡಿಯೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬಸು ಎಂಬಾತನ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಗೆ ಶೇರ್ ಚಾಟ್ ಮೂಲಕ ಬಸು ಪರಿಚಿತನಾಗಿದ್ದ. ಬಳಿಕ ಇಬ್ಬರು ಪರಸ್ಪರ ವಾಟ್ಸ್‌ಆ್ಯಪ್ ನಂಬರ್ ಪಡೆದುಕೊಂಡು ಚಾಟ್ ಮಾಡುವುದು, ಮಾತನಾಡುವುದು ಮಾಡುತ್ತಿದ್ದರು. ಈ ನಡುವೆ ಪ್ರೀತಿಸುವಂತೆ ಬಸು ಒತ್ತಾಯಿಸಿದ್ದು ಅದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಳು. ಬಳಿಕ ಶೇರ್ ಚಾಟ್‌ನ ಪ್ರೊಫೈಲ್‌ನಲ್ಲಿದ್ದ ಫೋಟೊವನ್ನು ಕದ್ದು ಅಶ್ಲೀಲವಾಗಿ ಎಡಿಟ್ ಮಾಡಿ ವಿದ್ಯಾರ್ಥಿನಿಗೆ ಕಳುಹಿಸಿದ್ದ. ಅಲ್ಲದೆ, ಖಾಸಗಿ ಫೋಟೊಗಳನ್ನು ಕಳುಹಿಸುವಂತೆ ಪೀಡಿಸುತ್ತಿದ್ದ.
    ಖಾಸಗಿ ಫೋಟೊ, ವಿಡಿಯೋ ಕಳುಹಿಸದಿದ್ದರೆ ಎಡಿಟ್ ಮಾಡಿದ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಹಾಗಾಗಿ ವಿದ್ಯಾರ್ಥಿನಿ ತನ್ನ ಖಾಸಗಿ ಫೋಟೊ, ವಿಡಿಯೋಗಳನ್ನು ಕಳುಹಿಸಿ ಆತನ ನಂಬರ್ ಬ್ಲಾಕ್ ಮಾಡಿದ್ದಳು. ನಂಬರ್ ಬ್ಲಾಕ್ ಮಾಡಿದ ಸಿಟ್ಟಿಗೆ ಆಕೆಯ ಅಶ್ಲೀಲ ವಿಡಿಯೋ ಮತ್ತು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬೇರೆ ಬೇರೆ ಗ್ರೂಪ್‌ಗಳಿಗೆ ರವಾನಿಸಿದ್ದ. ಈ ವಿಚಾರ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯ ಗಮನಕ್ಕೆ ಬಂದಿದ್ದು ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಸು ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ್ದನೀಡಿದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts