More

    ಹೆಬ್ಬಾಳ ಮೇಲ್ಸೇತುವೆಯಲ್ಲಿ ಸ್ಕೇಟಿಂಗ್​! ಯುವಕನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

    ಬೆಂಗಳೂರು: ರಾಜಧಾನಿಯಲ್ಲಿ ಎಲ್ಲಿ ನೋಡಿದಲ್ಲಿ ಸಂಚಾರದಟ್ಟಣೆ ಕಂಡುಬರುವುದು ಒಂದೆಡೆಯಾದರೆ, ರಸ್ತೆಗಳಲ್ಲಿ ಬೇಜವಾಬ್ದಾರಿ ಪ್ರದರ್ಶಿಸುವವರು ಮತ್ತೊಂದೆಡೆ. ಈ ಮಾತಿಗೆ ಸಾಯಾಗಿ ಯುವಕನೊಬ್ಬ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸ್ಕೇಟಿಂಗ್​ ಮಾಡುತ್ತ ಅಪಾಯಕಾರಿಯಾಗಿ ಸಂಚರಿಸಿದ್ದಾನೆ. ಇದನ್ನು ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ನಿರ್ದಿಷ್ಟ ಜಾಗದಲ್ಲಿ ಸ್ಕೇಟಿಂಗ್​ ಮಾಡಬೇಕು. ಟ್ರಾಫಿಕ್​ ಮಧ್ಯೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ. ಆದ್ದರಿಂದ ಇತರೆ ಪ್ರಯಾಣಿಕರು, ಪಾದಚಾರಿಗಳ ಜೀವಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

    ಫುಟ್​ಬೋರ್ಡ್​ ಮೇಲೆ ನಿಂತು ಸಂಚಾರ!

    ದಂಪತಿ ಸ್ಕೂಟರ್​ನಲ್ಲಿ ತಮ್ಮ ಮಗನನ್ನು ಹಿಂಬದಿ ಸವಾರರು ಬಳಸುವ ಫುಟ್​​ಬೋರ್ಡ್​ನಲ್ಲಿ ನಿಲ್ಲಿಸಿಕೊಂಡು ಸಂಚರಿಸುತ್ತಿದ್ದ ಘಟನೆ ಇತ್ತೀಚೆಗೆ ವೈಟ್​ಫೀಲ್ಡ್​​ನಲ್ಲಿ ನಡೆದಿದೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವೀಡಿಯೋ ವೈರಲ್​ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts