More

    ಮಹಿಳೆಯನ್ನ ನಗ್ನಗೊಳಿಸಿ ಹಿಂಸೆ ಕೊಟ್ಟ ಕೇಸ್​ಗೆ ಟ್ವಿಸ್ಟ್​! ಆರೋಪಿಗಳಲ್ಲಿ ಒಬ್ಬ ಪೊಲೀಸ್ ಜೀಪ್ ಡ್ರೈವರ್ ಆಗಿದ್ದವ…

    ಯಾದಗಿರಿ: ಮಹಿಳೆಯನ್ನ ನಗ್ನಗೊಳಿಸಿ ಅಂಗಾಂಗ ಮುಟ್ಟಿ ಮನಬಂದಂತೆ ಥಳಿಸಿದ್ದ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ ಸಿಕ್ಕಿದೆ.

    ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನ ವಿವಸ್ತ್ರಗೊಳಿಸಿದ್ದ ದರುಳರು, ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಕಬ್ಬಿನ ಜಲ್ಲೆಯಲ್ಲಿ ಮನಬಂದಂತೆ ಥಳಿಸಿ ಈ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಕೆಲ ತಿಂಗಳ ಹಿಂದೆಯೇ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೈಶಾಚಿಕ ಕೃತ್ಯದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಓರ್ವ ಪೊಲೀಸ್ ಜೀಪ್ ಡ್ರೈವರ್ ಆಗಿದ್ದವ!

    ಯಾದಗಿರಿಯ ಚಟ್ನಳ್ಳಿ ಹಾಗೂ ಹಳಿಸಗರ ಗ್ರಾಮದ ನಡುವಿನ ಸುತ್ತಮುತ್ತ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಮೇಲೆ ಪೈಶಾಚಿಕ ಕೃತ್ಯವೆಸಗಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಒಂದೂವರೆ ವರ್ಷದ ಹಿಂದೆ ನಡೆದದ್ದು ಎಂದು ಆರೋಪಿಗಳ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

    ಈ ಪೈಶಾಚಿಕ ಕೃತ್ಯವೆಸಗಿದ ವೇಳೆ ಓರ್ವ ಆರೋಪಿ ಪಿಎಸ್ಐ ವಾಹನ ಚಾಲಕನಾಗಿದ್ದನಂತೆ. ಇತ್ತೀಚಿಗೆ ಆರೋಪಿ ಕೆಲಸ ಬಿಟ್ಟಿದ್ದ ಎಂದು ತಿಳಿದು ಬಂದಿದೆ.

    ನಿಮ್ಮ ಕಾಲಿಗೆ ಬೀಳ್ತೀನಿ, ಪ್ಲೀಸ್​ ಬಿಟ್ಬಿಡಿ ಎಂದು ಅಂಗಲಾಚಿದ್ರೂ ನಗ್ನಗೊಳಿಸಿ ಅಂಗಾಂಗ ಮುಟ್ಟಿ ಮನಬಂದಂತೆ ಥಳಿಸಿದ್ರು…

    ಹುಣಸೂರಲ್ಲಿ ಮಗನ ಜತೆ ಚಿಕ್ಕಮ್ಮನ ಕಾಮದಾಟ! ಗುಟ್ಟು ರಟ್ಟಾಗುತ್ತಿದ್ದಂತೆ ನಡೆದೇ ಹೋಯ್ತು ದುರಂತ

    ತುಮಕೂರಲ್ಲಿ ಗಂಡನನ್ನ ಕೊಂದು ಚರಂಡಿಗೆ ಎಸೆದ ಪತ್ನಿ! ಬೆಚ್ಚಿಬೀಳಿಸುತ್ತೆ ಅವಳ ಕ್ರೂರತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts