More

    ರೈತರಿಲ್ಲದ ಪ್ರಪಂಚ ಸಾಧ್ಯವಿಲ್ಲ

    ಚಿತ್ರದುರ್ಗ: ಜಲ ಆಯ-ವ್ಯಯ ಆಧರಿಸಿ ದಿಬ್ಬದಿಂದ ಕಣಿವೆಯವರೆಗೆ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಹೇಳಿದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ, ಜಿಪಂ ವತಿಯಿಂದ ಹುಲ್ಲೂರು ಗ್ರಾಮದ ಅಮೃತ ಸರೋವರ ಕೆರೆ ಬಳಿ ಶುಕ್ರವಾರ ಏರ್ಪಡಿಸಿದ್ದ ಜಲ ಸಂಜೀವಿನಿ-ರೈತ ಸಂವಾದ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ರೈತರು ದೇಶದ ದೇಶದ ಬೆನ್ನೆಲುಬು. ರೈತರಿಲ್ಲದ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮುಂದಿನ ಆರ್ಥಿಕ ವರ್ಷದಿಂದ ರಾಜ್ಯಾದ್ಯಂತ ಜಲ ಸಂಜೀವಿನಿ ಹೆಸರಿನಲ್ಲಿ ಜಿಐಎಸ್ ವೈಜ್ಞಾನಿಕ ಆಧಾರಿತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

    ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯವನ್ನು ರೈತರಿಗೆ ತಿಳಿಸಲು ಮತ್ತು ಅಮೃತ ಸರೋವರ ಅನುಷ್ಠಾನ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (್ಕಖಎಐಖ) ತಾಂತ್ರಿಕತೆ ಆಧರಿಸಿ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಜಿಪಂ ಡಿಎಸ್ ಡಾ.ಎಸ್.ರಂಗಸ್ವಾಮಿ ಮಾತನಾಡಿ, ಆರ್ಥಿಕ ಬೆಳವಣಿಗೆ, ಮಾನವ ಕುಲದ ಯೋಗಕ್ಷೇಮಕ್ಕೆ ಗೋಮಾಳ ಭೂಮಿ ರಕ್ಷಣೆ ಅಗತ್ಯವಿದೆ ಎಂದರು.
    ಆಯ್ದ ರೈತರನ್ನು ಸನ್ಮಾನಿಸಲಾಯಿತು. ತಾಪಂ ಇಒ ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts