More

    ಮಹಿಳ ಸಾಧಕಿಗೆ ಕೀಳಿರಮೆ ಬೇಡ

    ಗಂಗಾವತಿ: ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಕೀಳಿರಮೆ ಬಿಟ್ಟು ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ ಎಂದು ತಾಪಂಇಒ ಲಕ್ಷ್ಮಿದೇವಿ ಯಾದವ್ ಹೇಳಿದರು.

    ಇದನ್ನೂ ಓದಿ: ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    ನಗರದ ಸಂಕಲ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾಲಯದ 10ನೇ ವಾರ್ಷಿಕೋತ್ಸವದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪುರುಷರಿಗೆ ಸಮಾನರಿಗೆ ಮಹಿಳೆಯರು ಸಾಧನೆ ಮಾಡುತ್ತಿದ್ದು, ಎಲ್ಲ ಹಂತದಲ್ಲೂ ಉನ್ನತ ಸ್ಥಾನ ಪಡೆಯುತ್ತಿದ್ದಾಳೆ. ಸಾಧನೆ ಮೂಲಕ ಸಮಾಜಕ್ಕೆ ಸಮಾನತೆ ಸಂದೇಶ ನೀಡಬೇಕು. ಸರ್ಕಾರ ಮತ್ತು ಸಮುದಾಯ ನೀಡಿದ ಅವಕಾಶ ಸದ್ಬಳಕೆಯಾಗಲಿ ಎಂದರು.

    ವಕೀಲ ಹಾಗೂ ಸಂಪನ್ಮೂಲ ವ್ಯಕ್ತಿ ನಾಗರಾಜ್ ಗುತ್ತೇದಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ವಿವಿ ಮಟ್ಟದ ಬಿಕಾಂ ಪದವಿಯಲ್ಲಿ ರ‌್ಯಾಂಕ್ ಪಡೆದ ಸಯ್ಯದಾ ಾತೀಮಾ, ತನುಜಾ ಬುಡ್ಡಾಲರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಹೇಮಂತರಾಜ ಕಲ್ಮಂಗಿ, ಉಪಾಧ್ಯಕ್ಷ ಡಾ.ಎಂ.ಆರ್. ಮಂಜುಸ್ವಾಮಿ, ನಿರ್ದೇಶಕರಾದ ಎಲ್.ಬಸವರಾಜ ಕೇಸರಹಟ್ಟಿ, ಡಾ.ಅಮಿತ್‌ಕುಮಾರ ರೆಡ್ಡಿ, ಪ್ರಾಚಾರ್ಯ ಬಸಪ್ಪ ಶಿರಿಗೇರಿ, ಉಪನ್ಯಾಸಕರಾದ ಸೋಮಶೇಖರ ಕಂಪ್ಲಿ, ಶಂಕರಲಿಂಗಪ್ಪ ಕೊಪ್ಪದ,
    ಡಾ.ಪಂಡರಿನಾಥ ಅಗ್ನಿಹೋತ್ರಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts